ಹುಬ್ಬಳ್ಳಿ: ಛೋಟಾ ಮುಂಬೈನಲ್ಲಿ ಮತ್ತೆ ಚಾಕು ಮಾರಕಾಸ್ತ್ರಗಳು ಸದ್ದು ಮಾಡಿವೆ. ಹುಬ್ಬಳ್ಳಿಯ ನವನಗರದ ಎಪಿಎಂಸಿಯಲ್ಲಿ ತರಕಾರಿ ಮಾರುತಿದ್ದವರ ಮೇಲೆ ಕ್ಷುಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅಪ್ತಾಬ್ ಎಂಬ ಯುವಕ ತನ್ನ ಸಹೋದರ ಹಾಗು ಅಳಿಯನ ಜೊತೆಯಲ್ಲಿ ತರಕಾರಿ ವ್ಯಾಪಾರ ಮಾಡುತಿದ್ದಾಗ ಪಕ್ಕದ ಅಂಗಡಿಯ ಮಾಲಿಕ ಮೌಲಾ , ತಾಜು ಸಹಿತ ನಾಲ್ಕು ಐದು ಜನರ ಗುಂಪು ಏಕಾಏಕಿ ಚಾಕು ಹಾಗು ಮಾರಕಾಸ್ತ್ರಗಳಿಂದ ಯುವಕರ ಮೇಲೆ ಚಾಕು ಬಾಟಲಿಗಳಿಂದ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದೆ. ಇನ್ನು ಆರೋಪಿಗಳು ಪರಾರಿ ಆಗಿದ್ದು, ಹಲ್ಲೆಗೆ ಒಳಗಾದ ಮೂವರನ್ನು ಚಿಕಿತ್ಸೆಗಾಗಿ ಕೀಮ್ಸ್ಗೆ ದಾಖಲಿಸಲಾಗಿದೆ. ನವನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.