K1N ಡೆಸ್ಕ್: ವ್ಯಕ್ತಿಯೋರ್ವನು ಸಾಕು ನಾಯಿಯನ್ನು ನಾಯಿ ಎಂದು ಬೈದ ಕಾರಣಕ್ಕೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ತಡಿಕೊಂಬು ಪಟ್ಟಣದಲ್ಲಿ ನಡೆದಿದೆ. 65 ವರ್ಷದ ರಾಯಪ್ಪನ್ ಹತ್ಯೆಯಾದವರು. ಪಕ್ಕದ ಮನೆಯವರು ನಾಯಿಗಾಗಿ ರಾಯಪ್ಪನ್ ಅವರಿಗೆ ಜಗಳವಾಗಿತ್ತು. ತನ್ನ ಸಂಬಂಧಿಕರೂ ಆದ ಡೇನಿಯಲ್ ಮತ್ತು ವಿನ್ಸೆಂಟ್ ಅವರ ನಾಯಿಗಳು ಅಲ್ಲಿ ಹೋಗುವ ಜನರ ಮೇಲೆ ಆಕ್ರಮಣಕಾರಿಯಾಗಿ ಎಂದು ರಾಯಪ್ಪನ್ ದೂರಿದ್ದರು. ಇನ್ನು ನಾಯಿಯನ್ನು ಅದರ ಹೆಸರಿನಿಂದ ಕರೆಯದೆ ನಾಯಿ ಎಂದು ಕರೆಯುತ್ತಿದ್ದರು. ಡೇನಿಯಲ್, ವಿನ್ಸೆಂಟ್ ನಡುವೆ ಜಗಳ ನಡದಿತ್ತು. ವಿನ್ಸೆಂಟ್ ಮತ್ತು ಡೇನಿಯಲ್ ಸಿಟ್ಟಿನಿಂದ ರಾಯಪ್ಪನ್’ಗೆ ಥಳಿಸಿದ್ದಾರೆ. ಇದರಿಂದ ರಾಯಪ್ಪ ಸಾವನ್ನಪ್ಪಿದ್ದಾರೆ.