ವಿಜಯಪುರ: YouTube ಮೂಲಕ
ಆನ್ಲೈನ್ ಪಾರ್ಟ್ ಟೈಮ್ ಜಾಬ್ನಲ್ಲಿ ಕಮಿಷನ್ ನೀಡುವ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಿ ಮಂಗಳವೇಡೆ ಮೋಸ ಹೋದವರು. ಇನ್ನು ಟೆಲಿಗ್ರಾಂನಲ್ಲಿ ಲಿಂಕ್ ಕಳಿಸಿ YouTube ಮೂಲಕ ಆನ್ಲೈನ್ ಟೈಮ್ ಜಾಬ್ ಮಾಡಿ ಕಮಿಷನ್ ಮೇಲೆ ಹಣ ಪಡೆದುಕೊಳ್ಳುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ 6.79 ಲಕ್ಷ ನಗದು ಪಡೆದುಕೊಂಡು ಪಂಗನಾಮ ಹಾಕಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.