ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಕಾರವೊಂದು ಧಗೆ ಧಗೆನೆ ಹೊತ್ತಿ ಉರಿದಿರುವ ಘಟನೆ ನಡೆದಿದೆ. ನಗರದ ವಿದ್ಯಾನಗರದ ರಿಲಯನ್ಸ್ ಮಾರ್ಟ್ ಎದುರು ಶಿಪ್ಟ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಮೊದಲು ಬೆಂಕಿ ಕಾಣಿಸಿಕೊಂಡ ಹೊಗೆ ಬಳಿಕ ನಂತರ ಧಗೆ ಧಗೆ ಹೊತ್ತಿ ಉರಿದಿದೆ. ಆದ್ರೇ, ಅದೃಷ್ಟವಶಾತ್ ಬಾರಿ ಅನಾಹುತ ತಪ್ಪಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.