ವಿಜಯಪುರ: ಶಾಸಕ ಯತ್ನಾಳ ರಾಜಕೀಯವಾಗಿ ಪೈಪೋಟಿ ನಡೆಸಬೇಕು. ಆದ್ರೇ, ವೈಯಕ್ತಿಕವಾಗಿ ಅಲ್ಲ ಎಂದು ಪಂಚಮಸಾಲಿ ಮುಖಂಡ ಸುರೇಶ ಬಿರಾದಾರ ಹೇಳಿದರು. ವಿಜಯಪುರ ನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ವೈಯಕ್ತಿಕ ದ್ವೇಷ ಸಾಧಿಸಬಾರದು. ಶಾಂತಿನಿಕೇತನ ಶಿಕ್ಷಣ ಸಂಸ್ಥೆಯನ್ನು ಯತ್ನಾಳ ಟಾರ್ಗೆಟ್ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಜಾಗ ಸರ್ವೇಗೆ ದಿಢೀರ ಭೇಟಿ ನೀಡಿದ್ದು ಖಂಡನೀಯ ಎಂದರು.
ಅಲ್ಲದೇ, ರಾಜಕೀಯ ದುರುದ್ದೇಶದಿಂದ ಮಹಾನಗರ ಪಾಲಿಕೆ ಅಧಿಕಾರಿಗಳು ಕಳುಹಿಸಿದ್ದರು. ಹಿಂದೂ ಹುಲಿ ಎಂದು ಹೇಳಿಕೊಂಡ ತಿರುಗಾಡುವುದು ಕೈ ಬಿಡಬೇಕು.
ವಿಜಯಪುರದಲ್ಲಿ ಹಿಂದೂತ್ವ ಬೆಳೆದಿದ್ದು ನಿಮ್ಮಿಂದ ಅಲ್ಲ. ಹಿಂದೂತ್ವ ಅರ್ಥ ಮಾಡಿಕೊಳ್ಳಬೇಕು. ಒಂದು ಸಮುದಾಯಕ್ಕೆ ಟಾರ್ಗೆಟ್ ಮಾಡಿ ಬೈಯುವುದು ಹಿಂದೂತ್ವ ಅಲ್ಲ, ಹಿಂದೂತ್ವ ಕೇವಲ ಭಾಷಣಕ್ಕೆ ಸಿಮೀತ ಆಗರಬಾರದು. ಪಂಚಮಸಾಲಿ 2ಎ ಮೀಸಲಾತಿಗೆ ಕಾಂಗ್ರೆಸ್ ಸಾತ್ ನೀಡಿದ್ದು ಸಂತಸದ ವಿಚಾರ ಆಗಿದೆ. ಪಂಚಮಸಾಲಿ ಹೋರಾಟಕ್ಕೆ ಯತ್ನಾಳರ ಅವಶ್ಯಕತೆ ಇಲ್ಲ. ಪಂಚಮಸಾಲಿ ಸಮಾಜಕ್ಕೆ ಸಚಿವ ಮುರುಗೇಶ ನಿರಾಣಿ ಕೊಡುಗೆ ಕೊಟ್ಟಿದ್ದಾರೆ. ಶಾಸಕ ಯತ್ನಾಳ ಏನು ಕೊಟ್ಟಿದ್ದಿ ಎಂದು ಪ್ರಶ್ನಿಸಿದರು. ಸಹಾಯ ಮಾಡಿದವರ ವಿರುದ್ಧ ತಿರುಗಿ ಬೀಳುವ ಪ್ರವೃತ್ತಿ ಶಾಸಕ ಯತ್ನಾಳಗೆ ಇದೆ. ಭಸ್ಮಾಸುರನಂತೆ ಶಾಸಕ ಯತ್ನಾಳ ಪರಿಸ್ಥಿತಿ ಉಂಟಾಗಿದೆ. ಇನ್ನೂ ಎರಡು ತಿಂಗಳಲ್ಲಿ ಭಸ್ಮಾಸುರನ ಪರಿಸ್ಥಿತಿ ಶಾಸಕ ಯತ್ನಾಳಗೆ ಬರುತ್ತದೆ ಎಂದರು.