ಕಂಟ್ರಿ ಪಿಸ್ತುಲ ವಶ

Karnataka 1 News
ಕಂಟ್ರಿ ಪಿಸ್ತುಲ ವಶ
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

 

ದಿನಾಂಕ: 03-03-2025

*ಎ.ಪಿ.ಎಮ್.ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಟ್ರಿ ಪಿಸ್ತೂಲ್ ಗಳನ್ನು  ವಶಪಡಿಶಿಕೊಂಡ ಬಗ್ಗೆ.*

ದಿನಾಂಕ: 02-03-2025 ರಂದು ಶ್ರೀ ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ, ಶ್ರೀ ಶಂಕರ ಮಾರಿಹಾಳ ಮತ್ತು ಶ್ರೀ ರಾಮನಗೌಡ ಹಟ್ಟಿ ಹಾಗೂ ಡಿಎಸ್‌ಪಿ ಶ್ರೀ ಬಸವರಾಜ ಯಲಿಗಾರ ರವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್ ವೃತ್ತ ರವರ ನೇತೃತ್ವದಲ್ಲಿ ಶ್ರೀಮತಿ ಜ್ಯೋತಿ ಖೋತ, ಪಿಎಸ್‌ಐ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ, ವಿಜಯಪುರ ನಗರದ ಇಂಡಿ ಬೈಪಾಸ್ ಹತ್ತಿರ, ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಆರೋಪಿತನಾದ;

 

*ಉಮೇರ್ ಬಂದೇನವಾಜ್ ಗಿರಗಾಂವ, 23 ವರ್ಷ, ಸಾ: ಗ್ಯಾಂಗ್ ಬಾವಡಿ, ಕುಂಬಾರ ಗಲ್ಲಿ, ವಿಜಯಪುರ*

ಈತನಿಗೆ ವಶಕ್ಕೆ ಪಡೆದು ಆತನ ಹತ್ತಿರ ಅನಧೀಕೃತವಾಗಿ ಖರೀದಿಸಿ, ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದ 02 ಕಂಟ್ರಿ ಪಿಸ್ತೂಲ್ ಗಳು ಹಾಗೂ 04 ಸಜೀವ ಗುಂಡುಗಳನ್ನು ಜಪ್ತ ಮಾಡಿಕೊಂಡಿರುತ್ತಾರೆ.

ಈ ಬಗ್ಗೆ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ *ಗುನ್ನೆ ನಂ : 19/2025.* *ಕಲಂ: 25(1)(a), 25(1a), 29(a), 29(b) ಭಾರತೀಯ ಆಯುಧ ಕಾಯ್ದೆ-1959* ರ ಅಡಿ ಪ್ರಕರಣ ದಾಖಲಿಸಿ, ಆರೋಪಿತನನ್ನು ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ತನಿಖೆಯಲ್ಲಿರುತ್ತದೆ.

 

 

ಸದರಿ ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಾದ ಶ್ರೀ ಮಲ್ಲಯ್ಯ ಮಠಪತಿ, ಸಿಬಿಐ ಗೋಲಗುಂಬಜ್ ವೃತ್ತ, ಶ್ರೀಮತಿ ಜ್ಯೋತಿ ಖೋತ, ಪಿಎಸ್‌ಐ ಎಪಿಎಮ್‌ಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರಾದ ಆಸಿಫ್.ಎ. ಗುಡಗುಂಟಿ ಸಿ.ಎಚ್.ಸಿ-409, ಸಂತೋಷ ಮೇಲಸಕ್ಕರಿ ಸಿಪಿಸಿ-1893, ರಮೇಶ ಜಾಧವ ಸಿಪಿಸಿ-1375, ಎಸ್.ಎ.ಬನಪಟ್ಟಿ ಸಿಪಿಸಿ-1502, ಆಸೀಫ್ ಲಷ್ಕರಿ ಸಿಪಿಸಿ-1802, ಯೋಗೇಶ ಮಾಳಿ ಸಿಪಿಸಿ-1745, ಭೀಮಾಶಂಕರ ಮಖಣಾಪೂರ ಸಿಪಿಸಿ-1751, ಆನಂದ ಹಿರೇಕುರಬರ ಸಿಪಿಸಿ-1887, ಎಸ್.ಎ.ಪೂಜಾರಿ ಸಿಪಿಸಿ-739, ಎಸ್.ಬಿ.ತೆಲಗಾಂದ ಸಿಪಿಸಿ-1614 ಇವರುಗಳ ಕರ್ತವ್ಯವನ್ನು ಶ್ಲಾಪಿಸಲಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";