ವಿಜಯಪುರ: ಪ್ರಸ್ತುತ ಸರ್ಕಾರವು 7ನೇ ವೇತನ ಆಯೋಗವನ್ನು ವಿಳಂಬವಾಗಿ ರಚನೆ ಮಾಡಿರುವುದಲ್ಲದೇ ಇದುವರೆಗೂ ವೇತನ ಆಯೋಗವು ಕ್ಷಿಪ್ರವಾಗಿ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸುವ ಮತ್ತು ರಾಜ್ಯ ಸರ್ಕಾರವು ಆಯವ್ಯಯ ಮಂಡನೆಯಲ್ಲಿ ಜಾರಿಗೊಳಿಸುವ ಕುರುಹುಗಳು ಕಂಡು ಬರದೇ ಇರುವುದು ನೌಕರರಲ್ಲಿ ನೋವುಂಟು ಮಾಡಿದೆ. 7ನೇ ವೇತನಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡದೇಇರುವುದರಿಂದ ವಾರ್ಷಿಕವಾಗಿ ನೌಕರರಿಗೆರೂ.15,000 ಕೋಟಿ ನಷ್ಟವಾಗುತ್ತಿದೆ. ರಾಜ್ಯದ ಎಲ್ಲ ನೌಕರ ಪರ ಸಂಘಟನೆಗಳು ಬೆಂಬಲಿಸಿದ್ದವು. ಆದರೆ, ರಾಜ್ಯ ಸರ್ಕಾರವು ನೌಕರರ ಹೋರಾಟವನ್ನು ಗಂಭೀರವಾಗಿ ಪರಿಗಣಸದೇ ಮಾತುಕತೆಗೆ ನೌಕರ ಮುಖಂಡರನ್ನು ಕರೆಯದೇ ಉದಾಸೀನ ತೋರಿತು. ಇದು ರಾಜ್ಯ ಸರ್ಕಾರಿ ನೌಕರರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ರಾಜ್ಯಾಧ್ಯಕ್ಷ ಜೈಕುಮಾರ ಹೆಚ್.ಎಸ್. ಹೇಳಿದರು.
ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಶ್ಚಿತ ಪಿಂಚಣ ಪದ್ದತಿ ಮರುಸ್ಥಾಪಿಸಬೇಕು. ಕೇಂದ್ರ ಹಾಗೂ ನೆರೆ ರಾಜ್ಯಗಳ ಮತ್ತು ಹೈಕೋರ್ಟ್ನ ನೌಕರರ ವೇತನಕ್ಕೂ ನಮ್ಮರಾಜ್ಯದ ನೌಕರರ ವೇತನಕ್ಕೂ ಕನಿಷ್ಠ 40% ವೇತನ ವ್ಯತಾಸವಾಗಿರುವ ಹಿನ್ನೆಲೆಯಲ್ಲಿತಕ್ಷಣವೇ ಶೇ. 25ರಷ್ಟು ಮಧ್ಯಂತರ ಪರಿಹಾರ ಘೋಷಿಸಬೇಕು. 7ನೇ ವೇತನಆಯೋಗದ ಪರಿಷ್ಕರಣೆ ಸಂಬAಧರಾಜ್ಯ ನೌಕರರಿಗೆ ನೀಡಬೇಕಾದ ಹೆಚ್ಚಿನ ವೇತನ ಪರಿಷ್ಕರಣೆಗಾಗಿ ವೇತನ 2023-24ನೇ ಆಯವ್ಯಯದಲ್ಲಿಅಂದಾಜುಅನುದಾನವನ್ನು ಕಾಯ್ದಿರಿಸಿ ಜಾರಿಗೊಳಿಸಬೇಕು. ರಾಜ್ಯದಲ್ಲಿ ಸುಮಾರು 2.80 ಲಕ್ಷಕ್ಕೂ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವುದು. ಆಡಳಿತ ಸುಧಾರಣೆ ನೆಪದಲ್ಲಿ ಶಿಫಾರಸ್ಸು ಮಾಡಲಾಗಿರುವ ಹುದ್ದೆಗಳ ಕಡಿತವನ್ನು ಕೈಬಿಡುವುದು ಮತ್ತು ಸರ್ಕಾರಿ ಸೇವೆಗಳ ಖಾಸಗೀಕರಣಕೈಬಿಡುವುದು ಹೊರಗುತ್ತಿಗೆ ನೌಕರರಿಗೆ ಸುಪ್ರೀಂಕೋರ್ಟ್ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಎಲ್ಲಾ ನೇರ ನೇಮಕಾತಿಯಲ್ಲಿ ಪ್ರಾತಿನಿಧ್ಯ ನೀಡಬೇಕು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಬಾಕಿ ಇರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಸಮಸ್ಯೆಗಳು, ಶಿಕ್ಷಕರ ನೇಮಕಾತಿ, ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸಬೇಕು. ಶಾಲೆಗಳನ್ನು ಮುಚ್ಚುವುದು, ಶಾಲೆಗಳ ವಿಲೀನ, ಹಾಸ್ಟೆಲ್ಗಳ ವಿಲೀನ, ಶಿಕ್ಷಕರ ಸಂಖ್ಯೆಗಳ ಕಡಿತ, ಶಿಕ್ಷಣದ ಖಾಸಗೀಕರಣ ಕೈ ಬಿಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕೈಬಿಡುವುದು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕೈಬಿಡಬೇಕೆಂದು ಆಗ್ರಹಿಸಿದರು.