ವಿಜಯಪುರ: ಸಿದ್ದೇಶ್ವರ ಶ್ರೀಗಳು ಕೇವಲ ಸಂತರಲ್ಲ; ಸಂತನ ರೂಪದಲ್ಲಿರುವ ಭಗವಂತ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಿಸಿದರು. ಭಾನುವಾರ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಲಿಂ. ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಅವರು ನುಡಿನಮನ ಸಲ್ಲಿಸಿದರು.
ಇಡೀ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಉಪನ್ಯಾಸ ಮಾಡುವ ಹಕ್ಕು ಇದೆ. ಆದರೆ ಅಧಿಕಾರ ಯಾರಿಗೂ ಇಲ್ಲ. ಸಮಾಜಕ್ಕೆ ದಾರಿದೀಪವಾಗಿದ್ದ ಜ್ಯೋತಿ ಇಂದು ಆರಿ ಹೋಗಿದೆ ಎಂದು ನನಗೇನು ಅನ್ನಿಸಿಲ್ಲ. ಏಕೆಂದರ ಇಂಥ ಜ್ಯೋತಿಯಿಂದಲೇ ಭಾರತ ಇಂದು ವಿಶ್ವ ಬೆಳಗುತ್ತಿರುವುದು ಎಂದರು.
ಪೂಜ್ಯ ಸಿದ್ದೇಶ್ವರ ಶ್ರೀಗಳ ಉಪನ್ಯಾಸದ ಒಂದಂಶವಾದರೂ ಅಳವಡಿಸಿಕೊಂಡರೆ ಅದುವೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದರು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ ಮತ್ತಿತರರಿದ್ದರು.