ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೂರಾರು CD ಮಾಡಿಕೊಂಡಿದ್ದಾರೆ. ನನ್ನ ಬಳಿ 120 ನಿಮಿಷದ ವಿಡಿಯೋ, ಆಡಿಯೋ ಇದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನೂರಾರು CD ಮಾಡಿಕೊಂಡಿದ್ದಾರೆ. ನನ್ನ ಬಳಿ 120 ನಿಮಿಷದ ವಿಡಿಯೋ, ಆಡಿಯೋ ಇದೆ. ವಿಡಿಯೋ, ಆಡಿಯೋ CBIಗೆ ನೀಡುತ್ತೇನೆ. ನನ್ನ ವಿರುದ್ಧ 40 ಕೋಟಿ ಖರ್ಚು ಮಾಡಿ CD ಷಡ್ಯಂತ್ರ ಮಾಡಲಾಗಿದೆ. ಡಿಕೆಶಿ, CD ಲೇಡಿ ಮತ್ತು 6 ಜನರು ಅರೆಸ್ಟ್ ಆಗಬೇಕು. ಕನಕಪುರದ ಗ್ರಾನೈಟ್ ಉದ್ಯಮಿ, ಮಂಡ್ಯದ ಇಬ್ಬರು ನಾಯಕರು, ಕಾಂಗ್ರೆಸ್ನ ಒಂದಿಬ್ಬರು CD ಷಡ್ಯಂತ್ರದ ಹಿಂದೆ ಇದ್ದಾರೆ ಎಂದರು.