ವಿಜಯಪುರ: ಇಂಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷರಾಗಿ ಪವನ ಕೊಡಹೊನ್ನ ಆಯ್ಕೆಯಾದರು. ವಿಜಯಪುರ ಜಿಲ್ಲೆಯ ಕಾನಿಪ ಸಂಘ ಧ್ವನಿ ಅಧ್ಯಕ್ಷ ಯೂಸುಫ್ ನೇವಾರ ತಾಲೂಕು ಅಧ್ಯಕ್ಷರಾಗಿ ಪವನ ಕೊಡಹೊನ್ನಗೆ ಆದೇಶ ಪ್ರತಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜಕುಮಾರ್ ವಾಲಿಕಾರಗೂ ಆದೇಶ ಪ್ರತಿ ನೀಡಿ ಆಯ್ಕೆ ಮಾಡಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡುರ, ಜಿಲ್ಲಾ ಉಪಾಧ್ಯಕ್ಷ ಇರ್ಫಾನ್ ಬೀಳಗಿ, ಸಾಯಬಣ್ಣ ಹಳ್ಳಿ,ಸಂತೋಷ ಹೊಸಮನಿ, ಅಶೋಕ ನಯ್ಕೊಡಿ, ಎಸ್ ಎಮ ಬಿರಾದಾರ ಉಪಸ್ಥಿತರಿದ್ದರು.