ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯಿಂದ ಬಂಜಾರ ಜನಜಾಗೃತಿ ಸೇವಾ ರಥ ಯಾತ್ರೆ

Karnataka 1 News
ರಾಷ್ಟ್ರೀಯ ಗೋರ್ ಸೇನಾ ಸಂಘಟನೆಯಿಂದ ಬಂಜಾರ ಜನಜಾಗೃತಿ ಸೇವಾ ರಥ ಯಾತ್ರೆ

*’ರಾಷ್ಟ್ರೀಯ ಗೋರ್ ಸೇನಾ ಸಂಘಟನೆ’ ಬೀದರ್ ನಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೆ ಹಮ್ಮಿಕೊಂಡಿರುವ *”ಬಂಜಾರ ಜನಜಾಗೃತಿ ಸೇವಾ ರಥ ಯಾತ್ರೆ ನಿನ್ನೆಯ ದಿನ ವಿದ್ಯುಕ್ತವಾಗಿ ಚಾಲನೆ ಗೊಂಡಿದೆ”* ಈ ರಥ ಯಾತ್ರೆಗೆ ಗೋರ್ ಸಿಕವಾಡಿ ಸಂಘಟನೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಬೃಹತ್ ಪ್ರಮಾಣದಲ್ಲಿ ಸ್ವಾಗತಿಸೋಣ .

 

ಹಾಗೆ ಸಮಾಜದ ಎಲ್ಲ ಸಂಘಟನೆಗಳ ಮತ್ತು ಸಮಾಜ ಭಾಂಧವರ ಬೆಂಬಲವಿರಲಿ.ಸಮುದಾಯದ ಏಕತೆಯನ್ನು ಹಾಗೂ ಅಸ್ಮಿತೆಯನ್ನು ಕಾಪಾಡಲು ಬಂಜಾರ ಸಮುದಾಯ ಜೋಡೋ ರಥಯಾತ್ರೆಯನ್ನು ನಾವೆಲ್ಲರೂ ಬೆಂಬಲಿಸೋಣ.
ಇಂದು ರಥಯಾತ್ರೆ ಬೆಳಿಗ್ಗೆ 9:30 -10:00 ಘಂಟೆಯ ಸುಮಾರಿಗೆ ಸಿಂದಗಿ ಬೈಪಾಸ್ ಫ್ಲೈಓವರ್ ಹತ್ತಿರ ಬರಮಾಡಿಕೊಳ್ಳಲಾಗುವುದು. ನಂತರ ಸೋಲಾಪುರ ರೋಡಿನಲ್ಲಿರುವ ಶ್ರೀ ಹಮುಲಾಲ್ ದೇವಸ್ಥಾನ,ಬಂಜಾರಾ ಸರ್ಕಲ್,ಶಿವಾಜಿ ಚೌಕ್,ಗಾಂಧಿ ಸರ್ಕಲ್ ಮುಖೇನ ಹಾದು ಡಾ ಅಂಬೇಡಕರ್ ಸರ್ಕಲ್ ತಲುಪಿ ಜನಜಾಗೃತಿ ಸಭೆಯಾಗಿ ಪರಿವರ್ತಿತವಾಗುವುದು.ಸುಮಾರು ೨೦೦ ಕ್ರೂಸರ್ ಹಾಗು ಇನ್ನಿತರ ವಾಹನಗಳು ೧೫೦೦-೨೦೦೦ ಗೊರಸೇನಾ ಕಾರ್ಯಕರ್ತರು ರಥಯಾತ್ರೆಯಲ್ಲಿ ಹೊರಟಿದ್ದಾರೆ.ಕಾರಣ ತಾವುಗಳು ಕೂಡ ಬಂದು ಬೆಂಬಲಿಸಲು ವಿನಮ್ರ ಕೋರಿಕೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";