ವಿಜಯಪುರ: ನಡೆದಾಡುವ ದೇವರು ವಿಧಿವಶ ಆಗಿದ್ದಾರೆ. ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ವಿಧಿವಶರಾದರು. ಆಶ್ರಮದ ಮೊದಲ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆಗೆ ಸ್ಪಂದಿಸದೇ ನಡೆದಾಡುವ ದೇವರು ನಿಧನರಾದರು. ದೇವರು ಇನ್ನಿಲ್ಲದ ಸುದ್ದಿ ಕೇಳಿ ಭಕ್ತರಲ್ಲಿ ಸಿಡಿಲು ಬಡಿದಂತೆ ಆಗಿದೆ. ಅಲ್ಲದೇ, ಅಧಿಕೃತವಾಗಿ ಜಿಲ್ಲಾಧಿಕಾರಿ ಡಿಸಿ ವಿಜಯಮಹಾಂತೇಶ ದಾನಮ್ಮನವರ ಘೋಷಣೆ ಮಾಡಿದರು.