ವಿಜಯಪುರ: ಬಸವಣ್ಣನವರ ಜನ್ಮ ಸ್ಥಳದಲ್ಲಿ ಶೋಕಸಾಗರ ತುಂಬಿದ್ದು, ಜ್ಞಾನಯೋಗಿ ದರ್ಶನಕ್ಕೆ ಭಕ್ತ ಸಾಗರ ಆಗಮಿಸುತ್ತಿದೆ. ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ಲಕ್ಷ ಲಕ್ಷ ಜನರಿಂದ ಸಿದ್ದೇಶ್ವರ ಶ್ರೀಗಳಿಗೆ ನಮನ ಸಲ್ಲಿಸಲಾಗುತ್ತಿದೆ. ಅಂತೆಯೇ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯಕ್ತಿಯೊಬ್ಬರು ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ಬಂದಿದ್ದಾರೆ. ವಿಜಯಪುರದ ನಾಗಠಾಣ ಗ್ರಾಮದ 85 ವರ್ಷದ ಓಂಶಾಂತಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಪರದಾಟ ನಡೆಸುತ್ತಿದ್ದರು. ಬಬಲೇಶ್ವರ ಗ್ರಾಮದ ಶಿವಾನಂದ ಅಜ್ಜಿಯ ಪರದಾಟ ನೋಡಿ ಭುಜದ ಮೇಲೆ ಹೊತ್ತು ತಂದಿದ್ದಾರೆ.