BLDE jss ಕಾಲೇಜ್ ನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ

Karnataka 1 News
BLDE jss ಕಾಲೇಜ್ ನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ

ವಿಜಯಪುರ: ಹೆಣ್ಣು ಮಕ್ಕಳು ತಮಗೆ ವಹಿಸಿದ ಕೆಲಸವನ್ನು ನಿರ್ಭೀತಿ ಮತ್ತು ಛಲದಿಂದ ಮಾಡಬೇಕು. ತಿರಸ್ಕರಿಸಿದವರೇ ಪುರಸ್ಕರಿಸುವಂತೆ ಸಾಧನೆ ಮಾಡಬೇಕು ಎಂದು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ಹೆಡ್ ಕಾನಸ್ಟೇಬಲ್ ಜಯಂತಿ ನಾಯಕ ಹೇಳಿದ್ದಾರೆ.

ಇಂದು ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಗ್ನೊ(ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ) ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪೋಷಕರು ತಮ್ಮ ಹೆಣ್ಣುಮಕ್ಕಳು ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕು. ಈ ಮೂಲಕ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಇಗ್ನೊ ಸಹಾಯಕ ಪ್ರಾದೇಶಿಕ ಕೇಂದ್ರದ ನಿರ್ದೇಶಕ ದೇವೇಂದ್ರ ಬಳ್ಳಾರಿ ಮಾತನಾಡಿ, ಹೆಣ್ಣು ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಅತ್ತೆಯಂದಿರು ಸೊಸೆಯನ್ನು ಮಗಳಂತೆ ಮತ್ತು ಸೊಸೆಯಂದಿರು ಅತ್ತೆಯನ್ನು ತಾಯಿಯಂತೆ ಕಾಣಬೇಕು. ಮಹಿಳೆಯರು ಹೆಣ್ಣು ಮಕ್ಕಳನ್ನು ಗೌರವಿಸುವ ಸಮಾಜವನ್ನು ಶಿಕ್ಷಕರು ನಿರ್ಮಿಸಬೇಕು ಎಂದು ಹೇಳಿದರು.

ಖೇಲೋ ಇಂಡಿಯಾ ಚಾಂಪಿಯನಶಿಪ್ ಕ್ರೀಡಾಪಟು ಪಾಯಲ ಚವ್ಹಾಣ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಯಾವುದಕ್ಕೂ ಹೆದರದೆ, ಟೀಕೆಗಳಿಗೆ ಕಿವಿಗೊಡದೆ ತಮ್ಮ ಸಾಧನೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ. ಖಾಸನಿಸ ಮಾತನಾಡಿ, ಮಹಿಳೆಯರು ತಮ್ಮ ಅಂತಃಶಕ್ತಿಯನ್ನು ಅರಿತುಕೊಂಡು, ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವ ಶಕ್ತಿಯನ್ನು ಪರಿಸರದಿಂದ ಪಡೆದುಕೊಂಡಿರುತ್ತಾರೆ. ಎಲ್ಲ ಮಹಿಳೆಯರು ಶಿಕ್ಷಣ, ಸ್ವಾತಂತ್ರ ಮತ್ತು ಸ್ವೇಚ್ಛೆ ನಡುವಿನ ವ್ಯತ್ಯಾಸವನ್ನು ಅರಿತುಕೊಂಡು, ಎಲ್ಲ ಕ್ಷೇತ್ರದಲ್ಲಿ ಸಮಾನವಾಗಿ ನಿಲ್ಲೋಣ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್. ಪಿ. ಶೇಗುಣಸಿ, ಡಾ. ಬಿ. ಎಸ್. ಹಿರೇಮಠ ಮಾತನಾಡಿದರು.

ಪ್ರಶಿಕ್ಷಣಾರ್ಥಿಯಾದ ಪಲ್ಲವಿ ಹಿರೇಮಠ ಮಹಿಳೆಯರ ಸ್ಥಿತಿಗತಿಗಳು ಮತ್ತು ಸಾಧನೆಯ ಹಿಂದಿನ ಪರಿಶ್ರಮದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ವಿಜಯಪುರ ಅಂಚೆ ಇಲಾಖೆಯ ಜ್ಯೋತಿ ಅನಿಲಕುಮಾರ ಹಡಪದ, ಕ್ರೀಡಾಪಟು.ಪಾಯಲ ಚವ್ಹಾಣ, ಮುಖ್ಯ ಪೇದೆ ಜಯಂತಿ ನಾಯಕ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಾಂಧಿ ಚೌಕ ಪೊಲೀಸ್ ಸ್ಟೇಷನ ವಿಜಯಪುರ ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ಡಾ. ಮಂಜುನಾಥ ಕೋರಿ, ಸಹಾಯಕ ಪ್ರಾಧ್ಯಾಪಕ ಡಾ. ಜೆ. ಎಸ್. ಪಟ್ಟಣಶೆಟ್ಟಿ, ಡಾ. ಬಿ. ಎಸ್. ಹಿರೇಮಠ, ಸುನಿಲ ಎಸ್. ಪಾಟೀಲ, ಎ. ಎಸ್. ಮಸಳಿ, ಪಿ. ಡಿ. ಮುಲ್ತಾನಿ, ಡಾ. ಎಸ್. ಪಿ. ಶೇಗುಣಸಿ, ಸಂಶೋಧನಾ ವಿದ್ಯಾರ್ಥಿ ಸುಜಾತ ಮತ್ತಿವಾಡ, ಸಿಬ್ಬಂದಿಯಯಾದ ಎಸ್. ಎ. ದೇಸಾಯಿ, ವಿದ್ಯಾ ಬಮಗೊಂಡ, ಮಹಾದೇವಿ ಪೂಜಾರಿ, ಪದ್ಮಾವತಿ ಹೊನಕಟ್ಟಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು,

ಶೃತಿ ಉಮರಾಣಿಕರ ಸ್ವಾಗತಿಸಿದರು, ಅಪ್ಸಾನಾ ಮುಜಾವರ ಪರಿಚಯಿಸಿದರು, ಪ್ರಶಿಕ್ಷಣಾರ್ಥಿ ಅಶ್ವಿನಿ ಜಿತ್ತಿ ನಿರೂಪಿಸಿದರು,ಸುಷ್ಮಾ ಸಿದ್ದಾಪುರ ವಂದಿಸಿದರು.

LDEA JSS Collage World Women Day News*: ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಗ್ನೊ(ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ) ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಗಾಂಧಿಚೌಕ್ ಪೊಲೀಸ್ ಠಾಣೆಯ ಹೆಡ್ ಕಾನಸ್ಟೇಬಲ್ ಜಯಂತಿ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ದೇವೇಂದ್ರ ಬಳ್ಳಾರಿ, ಪಾಯಲ ಚವ್ಹಾಣ, ಡಾ. ಭಾರತಿ ವೈ. ಖಾಸನಿಸ, ಡಾ. ಎಸ್. ಪಿ. ಶೇಗುಣಸಿ ಮುಂತಾದವರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";