ಬಾಗಲಕೋಟೆ: ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು 6 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ನಾವು ಹೋರಾಟ ಮಾಡಲೇಬೇಕಾಗಿದೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಕೂಡಲಸಂಗಮ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮಿಜೀ ಹೇಳಿದರು. ಬಾಗಲಕೋಟೆನಲ್ಲಿ ಮಾತನಾಡಿದ ಅವರು, ನ್ಯಾಯ ಸಿಗದೆ ಇದ್ದರೆ 2023 ರ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಅಂತ ಕಾದು ನೋಡಬೇಕಿದೆ. ಸರ್ಕಾರ ಹೋರಾಟಕ್ಕೆ ಸ್ಪಂದಿಸದಿದ್ದರೆ ಸರಕಾರ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯಾವ ಕಾರಣಕ್ಕೂ ಹೋರಾಟ ನಿಲ್ಲಲ್ಲ. ಸರ್ಕಾರದವರು ಇದೆ ರೀತಿ ತಳ್ಳುತ್ತಾ ಹೋದರೆ ಮುಂದೆ ನೀತಿಸಂಹಿತೆ ಬರುತ್ತದೆ. ಈಗಾಗಲೇ ಮೂಗಿಗೆ ತುಪ್ಪ ಹಚ್ಚಿದಾರೆ. ಈಗ ತಲೆಗೆ ತುಪ್ಪ ಹಚ್ಚುವ ಪ್ರಯತ್ನ ಕಾಣದ ಶಕ್ತಿಗಳು ಮಾಡುತ್ತಿವೆ ಎಂದು ಕಿಡಿಕಾರಿದರು.