ವಿಜಯಪುರ: ನಿವೃತ್ತ ಸಹಾಯಕ ಕೃಷಿ ನಿರ್ದೇಶಕನಿಗೆ ಆನ್ಲೈನ್ ಮೂಲಕ ಓಲಾ ಎಲೆಕ್ಟ್ರಿಕ್ ಸ್ಕೂಟಿ ಡೆಲಿವರಿ ನೀಡುವ ಆಮಿಷ ನೀಡಿ 30 ಸಾವಿರ ನಗದು ಆನ್ಲೈನ್ನಲ್ಲಿ ವಂಚನೆಗೈದಿರುವ ಘಟನೆ ವಿಜಯಪುರದ ಬಸವನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಪುಗೌಡ ಪಾಟೀಲ ಮೋಸಹೋದವರು.
ಆನ್ಲೈನ್ ವಂಚನೆ..
ಆನ್ಲೈನ್ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟಿ ಸರ್ಚ್ ವೇಳೆ ಅನಾಮಧೇಯ ವ್ಯಕ್ತಿಗೆ ಬಾಪುಗೌಡ ಕರೆಗೈದು ಸ್ಕೂಟಿ ಕುರಿತು ವಿಚಾರಿಸಿದ್ದಾರೆ. ಸ್ಕೂಟಿಗೆ 80 ಸಾವಿರ ಆಗುತ್ತದೆ. ಅದಕ್ಕಾಗಿ ಮುಂಗಡವಾಗಿ 30 ಸಾವಿರ ನೀಡಬೇಕು ಎಂದು ಹೇಳಿದ್ದಾನೆ. ಇದನ್ನು ನಂಬಿ 30 ಸಾವಿರ ನಗದು ಆನ್ಲೈನ್ ಮೂಲಕ ಹಾಕಿದ್ದಾರೆ. ತದನಂತರ. 10 ಸಾವಿರ ಹಾಕುವಂತೆ ಹೇಳಿದಾಗ ಅನುಮಾನ ಬಂದು ವಿಚಾರಿಸಿದ್ದು, ಈ ಸಂದರ್ಭದಲ್ಲಿ ತಾನು ಮೋಸ ಹೋಗಿದ್ದು ಗಮನಕ್ಕೆ ಬಂದಿದೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.