ವಿಜಯಪುರ: ವಿಜಯಪುರ ನಗರದ ಕೊಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜಾಗುವ ಪ್ರದೇಶಗಳಿಗೆ ಜ.10ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. ವಿದ್ಯುತ್ ಇಲಾಖೆಯ 110ಕೆವ್ಹಿ ವಿದ್ಯುತ್ ಉಪಕೇಂದ್ರ ಮಟ್ಟಿಹಾಳದಿಂದ ಸರಬರಾಜು ಆಗುತ್ತಿರುವ 33ಕೆ.ವ್ಹಿ ಕೋಲ್ಹಾರ ವಿದ್ಯುತ್ ಮಾರ್ಗ ಹಾಗೂ ಕಾರಜೋಳ ಎಲ್.ಐ.ಎಸ್ ಮಾರ್ಗಗಳ ಮೇಲೆ ತುರ್ತು ನಿರ್ವಹಣೆ ಮಾರ್ಗಮುಕ್ತತೆ ಕೊಡಬೇಕಾಗಿರುವುದರಿಂದ ಸದರಿ ದಿನದಂದು ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೋಲ್ಹಾರ ಮುಖ್ಯ ಸ್ಥಾವರ ಹಾಗೂ ಮುಳವಾಡ ಮಧ್ಯಂತರ ಪಂಪಿಂಗ್ ಸ್ಟೇಷನ್ ಗೆ ವಿದ್ಯುತ್ ಸಂಪರ್ಕ ಕಡಿತದಿಂದಾಗಿ ನೀರು ನಿಲುಗಡೆಯಾಗುತ್ತದೆ. ಸದರಿ ದಿನಾಂಕದಂದುಮಂಡಳಿ ವತಿಯಿಂದ ಕೆಲವು ನಿರ್ವಹಣೆ ಕಾಮಗಾರಿಗಳು ಹಾಗೂ ಎಂ.ಎಸ್ ಕೊಳವೆ ಮಾರ್ಗಗಳಲ್ಲಿ ನೀರು ಸೋರುವಿಕೆ ದುರಸ್ಥಿ ಕಾಮಗಾರಿ ಕೈಗೊಳ್ಳುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.