ವಿಜಯಪುರ: ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಯುವತಿಯೊಬ್ಬರು ದೆಹಲಿಯ ವರೆಗೂ ಕಾಲ್ನಡಿಗೆ ಹಮ್ಮಿಕೊಂಡಿದ್ದಾಳೆ. ಹೌದು.. ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ಮಂಜುಳಾ ದೆಹಲಿ ವರೆಗೂ ಕಾಲ್ನಡಿಗೆ ಪಯಣ ಬೆಳೆಸಿದ್ದಾಳೆ. ಇದೀಗ್ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ ವಾಸ್ತವ್ಯ ಹೂಡಿದ್ದಾಳೆ.
ದೇಶದಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮನಸ್ಸು ಮಾಡಿದ್ರೇ ಎಲ್ಲವೂ ಸಾಧ್ಯ ಆಗುತ್ತದೆ
ಎಂದು ಕಾಲ್ನಡಿಗೆ ಹಮ್ಮಿಕೊಂಡಿರುವ ಮಂಜುಳಾ ಮನದಾಳದ ಮಾತು ಆಗಿದೆ.