ವಿಜಯಪುರ: WhatsApp ಹೆಸರಲ್ಲಿ
ಆನ್ಲೈನ್ ಪಾರ್ಟ್ ಟೈಮ್ ಜಾಬ್ನಲ್ಲಿ ಕಮಿಷನ್ ನೀಡುವ ಆಸೆ ತೋರಿಸಿ ಸಾವಿರಾರು ರೂಪಾಯಿ ವಂಚನೆ ಮಾಡಿರುವ ಘಟನೆ ವಿಜಯಪುರದ ಎಸ್ ಆರ್ ಕಾಲೋನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ನಿಖಿಲ ಕಲ್ಲೂರ ಮೋಸ ಹೋದವರು. ಇನ್ನು whatsapp ನಲ್ಲಿ ಲಿಂಕ್ ಕಳಿಸಿ Google Map ಮೂಲಕ ಆನ್ಲೈನ್ ಟೈಮ್ ಜಾಬ್ ಮಾಡಿ ಕಮಿಷನ್ ಮೇಲೆ ಹಣ ಪಡೆದುಕೊಳ್ಳುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ 77 ಸಾವಿರ ನಗದು ಪಡೆದುಕೊಂಡು ಪಂಗನಾಮ ಹಾಕಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.