ವಿಜಯಪುರ: ಈದ್ಗಾದಲ್ಲಿ ರಾಷ್ಟ್ರ ಧ್ವಜ ಹಾರಿಸುವ ವಿಚಾರದ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ಯಾವುದೆ ಟೀಕೆ, ಟಿಪ್ಪಣಿ ಮಾಡಲ್ಲ ಎಂದರು. ಇನ್ನು ಸಿದ್ದರಾಮಯ್ಯ ಮತ್ತು ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಬಿಎಸ್ವೈ, ನಾನು ಒಂದು ಕಡೆ ಹೊರಟಿದ್ದೆ, ಅವರು ಒಂದು ಕಡೆ ಹೊರಟಿದ್ದರು. ಆದ್ರೇ, ರಾಜಕೀಯ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಅದರಲ್ಲೇನು ವಿಶೇಷತೆ ಇಲ್ಲ. ಅವರೊಂದಿಗೆ ಚರ್ಚೆ ಮಾಡಲು ಏನಿದೆ. ನಮ್ಮ ವಿರೋಧಿಗಳ ಜೊತೆ ಏನ ಚರ್ಚೆ ಮಾಡೋದು ಎಂದರು.