*ಶಾಂತಿಕುಟೀರ ಕನ್ನೂರಿನಲ್ಲಿ ರಾಮನವಮಿ ಸಪಪ್ತಾಹ ಪ್ರಾರಂಭ*
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮ ಜಯಂತಿಯ ಸವಿನೆನಪಿಗಾಗಿ ಚೈತ್ರ ನವರಾತ್ರಿಯ ವಿಶೇಷ ಪರ್ವದಲ್ಲಿ ಸುಕ್ಷೇತ್ರ ಶಾಂತಿ ಶಾಂತಿಕುಟೀರ ಕನ್ನೂರಿನಲ್ಲಿ ಸಪ್ತಾಹವು ಪ್ರಾರಂಭಗೊಂಡಿತು. ಪ್ರತಿವರ್ಷದಂತೆ ಕ್ಷೇತ್ರಾಧಿಪತಿ ಶ್ರೀ ದತ್ತಾತ್ರೇಯನಿಗೆ ಪೂಜೆ ಆರತಿ ಸಲ್ಲಿಸಿ ಸದ್ಗುರು ಮಹಾರಾಜರ ಮಾತೋಶ್ರೀ ಅವರ ಸಮಾಧಿ, ನಿವಾಸ ಸ್ಥಾನಗಳಲ್ಲಿ ಆರತಿ ಹಚ್ಚಿ ಸಮಾಧಿ ಮಂದಿರ ಹಾಗೂ ಅಧಿಷ್ಠಾನ ಭಾವಚಿತ್ರಗಳ ಪೂಜೆ ಆರತಿಯೊಂದಿಗೆ ಸಪ್ತಾಹವು ಉದ್ಯುಕ್ತವಾಗಿ ಪ್ರಾರಂಭಿಸಲಾಯಿತು.
ಶ್ರೀ ಸಮರ್ಥ ರಾಮದಾಸ ಸ್ವಾಮಿ ರಚಿತ ಗ್ರಂಥರಾಜ ದಾಸಬೋಧದ ವಾಚನದ ನಂತರ ನಿರೂಪಣೆ ಶ್ರೀ. ಗಣೇಶ ನಾಯಿಕ್ ಅವರಿಂದ ನಡೆಯಿತು.ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕನ್ನೂರ, ವಿಜಯಪುರ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ,ಜಮಖಂಡಿ, ಡೊಮನಾಳ ,ಅರ್ಜುನಾಳ್ ,ಪುಣೆ, ಮುಂಬೈ ,ಸತಾರ, ನಾಸಿಕ್ , ಸೋಲಾಪುರ್ , ಹೈದರಾಬಾದ್ ಮುಂತಾದ ಊರುಗಳಿಂದ ಸದ್ಭಕ್ತರು ಆಗಮಿಸಿದ್ದರು. 6 ಎಪ್ರಿಲ್ ರಂದು ಸಪ್ತಾಹ ಸಮಾಪ್ತಿ ಆಗಲಿದೆ ಸಭೆಯಲ್ಲಿ ಶಾಂತಿ ಕುಟೀರ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ರವಿ ದಾನಿ, ಶ್ರೀ ವಿ. ಡಿ. ಪಾಟೀಲ್, ಡಾ. ಎಸ್. ಕನ್ನೂರ, ಶ್ರೀ ರಮೇಶ ಕನ್ನೂರ, ಶ್ರೀ P. H.ಲಮಾಣಿ, ಶ್ರೀ ಅಜಿತ ಕನ್ನೂರ, ಶ್ರೀ ಶ್ರೀಕೃಷ್ಣ ಸಂಪಗಾಂವಕರ ಮುಂತಾದವರು ಉಪಸ್ಥಿತರಿದ್ದರು. ಸರ್ವರಿಗೂ ಪ್ರಸಾದ ವಿತರಿಸಲಾಯಿತು.
ಈ ಸಪ್ತಾಹದ ವಿಶೇಷವೆಂದರೆ ಆರು ದಿಕ್ಕುಗಳಿಂದ ಆಗಮಿಸುವ ದಿಂಡಿ ಪಾದಯಾತ್ರೆಗಳು. ನೀತಿ – ಭಕ್ತಿ .ಆದರ್ಶಗ್ರಾಮ -ಸ್ವದೇಶಿ ಪ್ರಚಾರದ ಈ ಯಾತ್ರೆ ಕಳೆದ 33 ವರ್ಷಗಳಿಂದ ನಡೆದುಬಂದಿದೆ.ಸುಮಾರು 15 ದಿನದ ಯಾತ್ರೆಯು 200ಕ್ಕಿಂತ ಹೆಚ್ಚು ಹಳ್ಳಿಗಳನ್ನು ಸಂದರ್ಶಿಸಿ ವಿಧಾಯಕ ಕಾರ್ಯಗಳನ್ನು ಮಾಡಲು ಗ್ರಾಮಸ್ಥರಿಗೆ ಪ್ರೇರಣೆ ಕೊಡುತ್ತ ಸಾಗುತ್ತಿದೆ.
ಇಂಡಿ ತಾಲೂಕ ಅರ್ಜುನಾಳ-ಭಕ್ತಿ ಕುಟೀರ ; ಆಲಮೇಲ ತಾಲೂಕ ಬೊಮ್ಮನಹಳ್ಳಿಯ-ಬ್ರಹ್ಮಾನಂದ ಕುಟೀರ; ವಿಜಯಪುರ ತಾಲೂಕು-ಖತಿಜಾಪುರ; ಜತ, ರಾಮರತೀರ್ಥ,ಕಕಮರಿ-ಜ್ಞಾನಕುಟೀರ ;ಸೋಲಾಪುರ ಜಿಲ್ಲಾ ಬಾರ್ಶಿ ಹಾಗೂ ಮೋಹಳ ತಾಲೂಕ ಗೋಟೆವಾಡಿ ಅಧ್ಯಾತ್ಮ ಕುಟೀರ ಮುಂ. ಸ್ಥಳಗಳಿಂದ ಶಾಂತಿಕುಟೀರ ಕನ್ನೂರ ಕಡೆಗೆ ಈ ದಿಂಡಿ ಪಾದಯಾತ್ರೆ ತಂಡಗಳು ಪ್ರಯಾಣ ಬೆಳೆಸಿವೆ. ಅವು ದಿನಾಂಕ 5 ಏಪ್ರಿಲ್ ರಂದು ಆಶ್ರಮ ಸೇರಲಿವೆ .ದಿನಾಂಕ 5 ಏಪ್ರಿಲ ರಂದು ರಾಮನವಮಿಯ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಂದು ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ.