ವಿಜಯಪುರ: 3ನೇ ರಾಜ್ಯ ಮಟ್ಟದ ವಿಶ್ವಕರ್ಮ ವಧು- ವರರ ಅನ್ವೇಷಣಾ ಸಮಾವೇಶ ಫೆಬ್ರುವರಿ 24,25 26ರಂದು ವಿಜಯಪುರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ಪ್ರಮೋದ್ ಬಡಿಗೇರ ಹೇಳಿದರು.
ವಿಜಯಪುರ ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ ನಂಜುಂಡಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಉಚಿತ ವಧು ವರರ ಅನ್ವೇಷಣಾ ಸಮಾವೇಶ
ನಗರದ ಜಗದಾರಾಧ್ಯ ಜಯ ಶಾಂತಲಿಂಗೇಶ್ವರ ವಿಶ್ವಶಾಂತಿ ಭವನದಲ್ಲಿ ನಡೆಯಲಿದೆ. ಅಲ್ಲದೇ, ಅಪೇಕ್ಷಿತ ವಧು-ವರರ ಅನ್ವೇಷಕರು ನಿಗದಿತ ನೋಂದಣಿ ಅಪ್ಲಿಕೇಶನ್ ಫಾರಂ ಫಿಲ್ ಮಾಡಿ ಇತ್ತಿಚಿನ ಭಾವಚಿತ್ರ ಲಗತ್ತಿಸಿ ಸ್ಕಾನ್ ಕಾಪಿ, ವಾಟ್ಸಪ್ ಅಥವಾ ಟೆಲಿಗ್ರಾಂ ಮೂಲಕ 9448035713 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು. ಸಮಾವೇಶಕ್ಕೆ ಬರುವಾಗ ಈ ಅಪ್ಲಿಕೇಶನ್ ಪ್ರಿಂಟ್ ಔಟ್ ತೆಗೆದುಕೊಂಡು ತಮ್ಮ ಜೊತೆಯಲ್ಲಿ ತರಬೇಕು ಎಂದರು.