ವಿಜಯಪುರ: ಜಮೀನಿನಲ್ಲಿ ದಾರಿ ವಿಷಯಕ್ಕೆ ಓರ್ವನ ಮೇಲೆ ಎಂಟು ಜನರು ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಕಾನಾಳ ಗ್ರಾಮದಲ್ಲಿ ನಡೆದಿದೆ. ಮಹಾಂತಗೌಡ ತಂಗಡಗಿ ಹಲ್ಲೆಗೊಳಗಾದವರು. ಇನ್ನೂ ಮಲ್ಲಪ್ಪ ಸಜ್ಜನ, ಅಡಿವೆಪ್ಪ ಸಜ್ಜನ, ಸಂಗಣ್ಣಬಸಪ್ಪ ಸಜ್ಜನ, ಕಂಟಪ್ಪ ಸಜ್ಜನ, ಶರಣಬಸಪ್ಪ ಸಜ್ಜನ, ಶೇಖವ್ವ ಸಜ್ಜನ, ಭಾರತಿ ಸಜ್ಜನ, ನಿಂಗವ್ವ ಸಜ್ಜನ ವಿರುದ್ಧ ಕೇಸ್ ದಾಖಲಾಗಿದೆ. ಅಲ್ಲದೇ, ಕಾನಾಳ ಗ್ರಾಮದಲ್ಲಿರುವ ಜಮೀನಿನಲ್ಲಿ ದಾರಿ ವಿಷಯಕ್ಕೆ ಗಲಾಟೆ ಆಗಿದೆ. ಈ ವೇಳೆ ಮಹಾಂತಗೌಡನ ಮೇಲೆ ಹಲ್ಲೆಗೈದಿದ್ದಾರೆ. ಅದಕ್ಕಾಗಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. ಈ ಕುರಿತು ಬಸವನಬಾಗೇಬಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.