K1N ಡೆಸ್ಕ್: ಮುದ್ದಿನ ಹೆಂಡತಿಯ ಜನ್ಮದಿನ ಮರೆತರೆ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಹೌದು ಹೆಂಡತಿಯ ಹುಟ್ಟುಹಬ್ಬವನ್ನು ಮರೆತರೆ ಐದು ವರ್ಷ ಜೈಲು ಶಿಕ್ಷೆ. ಈ ವಿಚಿತ್ರ ಕಾನೂನು ತಿಳಿದ ನಂತರ ಆಶ್ಚರ್ಯ ಪಡಬೇಕಾಗಿದೆ. ಸಮೋವಾ ಎಂಬ ಸುಂದರ ದ್ವೀಪವು ನೋಡಲು ಸ್ವರ್ಗದಂತೆ ಸುಂದರವಾಗಿರಬಹುದು. ಆದರೆ ಇಲ್ಲಿ ಹೆಂಡತಿಯರ ಬಗ್ಗೆ ಗಂಡಂದಿರು ಸ್ವಲ್ಪ ಮೈಮರೆತು ತನ್ನ ಮಡದಿಯ ಜನ್ಮದಿನ ಮರೆತರೆ ಆತನಿಗೆ ನರಕದ ಅನುಭವವಾಗುವುದಂತೂ ನಿಜ. ಪತಿ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಮರೆತರೆ ಅವನಿಗೆ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪತ್ನಿ ಕೇಸ್ ನೀಡಿದರೆ ಪತಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎನ್ನುವ ಉದಾಹರಣೆಗಳಿವೆ. ಅದಕ್ಕಾಗಿ ನಿಮ್ಮ ಹೆಂಡತಿ ಜನ್ಮ ದಿನ ಮರೆಯದೆ ವಿಶ್ ಮಾಡುವ ಮೂಲಕ ಶಿಕ್ಷೆಯಿಂದ ಬಚಾಜ್ ಆಗಿ ಎನ್ನುವುದು ನಮ್ಮ ಸಲಹೆ.