ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮೂತ್ರ ಪಿಂಡ ಕಸಿ ಯಶಸ್ವಿಯಾಗಿ ನೆರವೇರಿಸುವ ಮೂಲಕ ಯಶೋಧಾ ಆಸ್ಪತ್ರೆ ವೈದ್ಯರು ವೈದ್ಯಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕಳೆದ 18 ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 21 ವರ್ಷದ ಯುವಕನಿಗೆ 74 ವಯೋಮಾನದ ಅಜ್ಜಿ ತನ್ನ ಒಂದು ಮೂತ್ರ ಪಿಂಡ ಕಸಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಅಜ್ಜಿ ಹಾಗೂ ಮೊಮ್ಮಗ ಇದೀಗ ಯಶಸ್ಸಿ ಚಿಕಿತ್ಸೆಯಿಂದ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ. ಸಚಿನ ಎಂಬ ಯುವಕ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದನು. ಮೂರು ವರ್ಷಗಳಿಂದ ಹಿಮೋ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದನು. ಹೀಗಾಗಿ ಈತನಿಗೆ ಮೂತ್ರ ಪಿಂಡದ ಕಸಿ ಮಾಡುವ ಅಗತ್ಯ ಕಂಡು ಬಂದಿತ್ತು. ಆದರೆ, ಮೂತ್ರಪಿಂಡ ದಾನಿಗಳು ಇರಲಿಲ್ಲ. ಇಂಥ ಸಂದರ್ಭದಲ್ಲಿ ಸಚಿನ ಅಜ್ಜಿಯೇ ತನ್ನದೊಂದು ಕಿಡ್ನಿ ದಾನ ಮಾಡಲು ಮುಂದೆ ಬಂದಾಗ ಆಸ್ಪತ್ರೆ ವೈದ್ಯ ರವೀಂದ್ರ ಮದ್ರಕಿ ನೇತೃತ್ವದ ವೈದ್ಯರ ತಂಡ ಮೂತ್ರ ಪಿಂಡ ಕಸಿ ನಡೆಸಿತು. ಇದೀಗ ಅಜ್ಜಿ ಹಾಗೂ ಮೊಮ್ಮಗ ಆರೋಗ್ಯವಾಗಿದ್ದಾರೆ.