ವಿಜಯಪುರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುವ ವೇಳೆಯಲ್ಲಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಿಜಯಪುರ ಇಂಡಿ ರಸ್ತೆಯಲ್ಲಿ ನಡೆದಿದೆ.
ಅಫಿಸುದೀನ್ ಶೇಖ, ಸಿದ್ರಾಮ ಕಲಬುರಗಿ, ಬಸವರಾಜ್ ಕಲಬುರಗಿ, ಗೌರಿಶಂಕರ ಪವಾರ್ ಬಂಧಿತ ಆರೋಪಿಗಳು. ಇನ್ನು 198.72 ಲೀಟರ್ ಮದ್ಯ, ಒಂದು ಮಿನಿ ಲಾರಿ, ಒಂದು ಬೈಕ್, ಮೂರು ಮೊಬೈಲ್ ಸೇರಿದಂತೆ ಮಹತ್ವದ ದಾಖಲೆಗಯ ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.