ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹೆಸರಿನಲ್ಲಿ ಕಳೆದ ಹಲವು ವರ್ಷಗಳ ಹಿಂದೆ ನಡೆದಿತ್ತು. ಇದೀಗ್ ಆತನ ಬಲಗೈಬಂಟ ಮಡುಸ್ವಾಮಿನ್ನು ಬೇರೆ ರೀತಿಯಲ್ಲಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಮಹತ್ವದ ಮಾಹಿತಿ ಲಭ್ಯವಾಗಿದೆ.
*ಯಾರು ಈ ಮಡುಸ್ವಾಮಿ*
ಹಂತಕ ಧರ್ಮರಾಜ್ ಚಡಚಣ ಬಲಗೈಬಂಟನಾಗಿ ಮಡುಸ್ವಾಮಿ ಕೆಲಸ ಮಾಡುತ್ತಿದ್ದ. ಅಲ್ಲದೇ, ಚಡಚಣ ತನ್ನ ಆತ್ಮ ರಕ್ಷಣೆಗಾಗಿ ಮಡುಸ್ವಾಮಿ ಗನ್ ನೀಡಿ ಕೆಲಸಕ್ಕೆ ಇಟ್ಟುಕೊಂಡಿದ್ದನು. ಇನ್ನೂ ಚಡಚಣ ನಕಲಿ ಎನ್ಕೌಂಟರ್ ಹತ್ಯೆ ಬಳಿಕ ತಲೆ ಮರೆಸಿಕೊಂಡಿದ್ದನು. ಇದೀಗ್ ಜೈಲು ಪಾಲಾಗಿದ್ದಾನೆ.
*ಜೈಲು ಸೇರಿದ್ದು ಯಾಕೆ..*
ಚಡಚಣ ಸಹೋದರರ ಹತ್ಯೆ ಸೇಡು ತೀರಿಸಿಕೊಳ್ಳುವ ಸಲುವಾಗಿ ರೌಡಿಶೀಟರ್ ಮಹಾದೇವ ಸಾಹುಕಾರ್ ಮೇಲೆ ದೊಡ್ಡ ಟಾರ್ಗೆಟ್ಗೈದು ಹತ್ಯೆಗೆ ಯತ್ನಿಸಿದ್ದನು. ಈ ವೇಳೆ ಸಾಹುಕಾರ್ ಜಸ್ಟ್ ಮೀಸ್ ಆಗಿದ್ದಾನೆ. ಆದ್ರೇ, ಸಾಹುಕಾರ್ ಸಹಚರ ಪೂಜಾರಿ ಅಸುನೀಗಿದ್ದಾನೆ. ಅದಕ್ಕಾಗಿ ಈ ಕೇಸ್ನಲ್ಲಿ ಮಡುಸ್ವಾಮಿ ಆ್ಯಂಡ್ ಗ್ಯಾಂಗ್ ಅಂದರ್ ಆಗಿದೆ. ಇದರ ಜೊತೆಗೆ ಚಡಚಣ ತಾಯಿ ವಿಮಲಾಬಾಯಿ ಚಡಚಣ ಕೂಡ ಜೈಲು ಪಾರಾಗಿದ್ದಾರೆ.
*ಮಾಸ್ಟರ್ ಮೈಂಡ್ ಮಲ್ಲಿಕಾರ್ಜುನ ಚಡಚಣ ಪತ್ತೆ ಇಲ್ಲ*
ಕಳೆದ ಹಲವು ದಶಕಗಳಿಂದ ಹಂತಕ ಮಲ್ಲಿಕಾರ್ಜುನ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಆದ್ರೇ, ಇತನ ಮೇಲೆ ಹಲವು ಕೇಸ್ಗಳಿವೆ. ಮಲ್ಲಿಕಾರ್ಜುನ ಬಂಧನವಾದ್ರೇ ಭೀಮಾತೀರದ ಹಂತಕನಿಂದ ಹಲವು ಮಹತ್ವದ ರಹಸ್ಯಗಳು ಹೊರಗಡೆಗೆ ಬರುತ್ತೇವೆ. ಆದ್ರೇ, ಇತನ ಬಂಧನ ಮಾತ್ರ ಇಲ್ಲಿಯವರೆಗೂ ಆಗಿಲ್ಲ.
*ಮಡುಸ್ವಾಮಿ ಪತ್ರ ಬರೆದಿದ್ದು ಯಾರಿಗೆ*
ಜೈಲಿನಲ್ಲಿ ನನಗೆ ದೌರ್ಜನ್ಯ ನೀಡಲಾಗುತ್ತಿದೆ ಎಂದು ಮಡುಸ್ವಾಮಿ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ. ಅದಕ್ಕಾಗಿ ನನಗೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
*ಮಡುಸ್ವಾಮಿ ಹತ್ಯೆ ಫಿಕ್ಸ್..?*
ಸಾಹುಕಾರ್ ಹತ್ಯೆಗೆ ಸಂಚು ರೂಪಿಸಿ, ಜಸ್ಟ್ ಅರ್ಧದಲ್ಲಿ ಸಾಹುಕಾರ್ ಮಡುಸ್ವಾಮಿ ಕೈಯಿಂದ ಪರಾರಿಯಾಗಿದ್ದಾರೆ. ಆದ್ರೇ, ಈ ಸಲ್ ಮಡುಸ್ವಾಮಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಮಾತುಗಳು ಕೇಳಿಬಂದಿದೆ. ಅದಕ್ಕಾಗಿ ಈ ಹತ್ಯೆಗೆ ಸಂಚು ರೂಪಿಸಿದ್ದು ಯಾರು ಅಂತ ಪೊಲೀಸ ತನಿಖೆ ಬಳಿಕ ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಭೀಮಾತೀರ ಹತ್ಯಾಕಾಂಡಕ್ಕೆ ಪೊಲೀಸರು ಇತಿ ಶ್ರೀ ಹಾಡಬೇಕಿದೆ ಅಷ್ಟೆ.