ಧಾರವಾಡ: ಈಜಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಸಮೀಪ ಮಡಕಿಹೋನ್ನಳ್ಳಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ನಡೆದಿದೆ. ಪವನ ನಾರಾಯಣಕರ 19 ವರ್ಷದ ಯುವಕನಾಗಿದ್ದು ಕಲಘಟಗಿ ಪಟ್ಟಣದ ಬೆಂಡಿಗೇರಿ ನಿವಾಸಿಯಾಗಿದ್ದಾನೆ. ಕೆರೆಯಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಪರಿಣಾಮ ಮೃತದೇಹ ಸಿಕ್ಕಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಯೋಧನಾಗುವ ಆಸೆ ಹೊತ್ತಿದ್ದ ಯುವಕ ಕೆಲವು ತಿಂಗಳ ಹಿಂದೆ ಮಿಲಿಟರಿ ಪರೀಕ್ಷೆಗೆ ಹಾಜರಾಗಿ ಬಂದಿದ್ದ ಎನ್ನಲಾಗಿದೆ. ಸ್ಥಳಕ್ಕೆ ಕಲಘಟಗಿ ಪೋಲಿಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರಿಕ್ಷೆಗೆ ತಾಲೂಕ ಆಸ್ಪತ್ರೆಗೆ ರವಾನಿಸಲಾಗಿದೆ.