ವಿಜಯಪುರ: ಬಿಟ್ಕೋನ್ ಹೆಸರಲ್ಲಿ ಹಣ ಡಬಲ್ ಮಾಡುವ ಹೆಸರಿನಲ್ಲಿ
ಆನ್ಲೈನ್ ಮೂಲಕ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ವಿಜಯಪುರದ ಮಲ್ಲಿಕಾರ್ಜುನ ನಗರದಲ್ಲಿ ನಡೆದಿದೆ. ಸಿದ್ದಣ್ಣ ಬಿರಾದಾರ ಮೋಸ ಹೋದವರು. ಇನ್ನು ಟೆಲಿಗ್ರಾಂನಲ್ಲಿ ಲಿಂಕ್ ಕಳಿಸಿ ಬಿಟ್ಕೋನ್ ನಲ್ಲಿ ಹಣ ತೊಡಗಿಸಿ ಹಣ ಡಬಲ್ ನೀಡುತ್ತೇವೆ. ಇನ್ನೂ ಆನ್ಲೈನ್ ನಲ್ಲಿ ಡಬಲ್ ಹಣ ಪಡೆದುಕೊಳ್ಳುವಂತೆ ಆಮಿಷ ನೀಡಿದ್ದಾರೆ. ಇದನ್ನು ನಂಬಿ 4.78 ಲಕ್ಷ ನಗದು ಪಡೆದುಕೊಂಡು ಪಂಗನಾಮ ಹಾಕಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.