ವಿಜಯಪುರ: ಬ್ರಾಹ್ಮಿಣ ಆರ್ಗನೈಜೆರಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಬ್ರಾಹ್ಮಣ ಶಕ್ತಿ ಸಂಗಮ ಕಾರ್ಯಕ್ರಮ ಫೆಬ್ರವರಿ 25ರಂದು ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಿಣ ಆರ್ಗನೈಜೆರಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ರವೀಂದ್ರ ಕುಲಕರ್ಣಿ ಹೇಳಿದರು. ವಿಜಯಪುರ ನಗರದಲ್ಲಿ ರವಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಕಂದಗಲ್ ಹಣಮಂತರಾಯ್ ರಂಗಮಂದಿರದಲ್ಲಿ ಬೆಳಗ್ಗೆ 9 ಕ್ಕೆ ಶೋಭಾಯಾತ್ರೆಗೆ ವೇ.ಮೂ. ಶ್ರೀ ಕೃಷ್ಣಭಟ್ಟ ಗಲಗಲಿ, ವೇ.ಮೂ. ಶ್ರೀ ಶಂಕರಭಟ್ಟ ಅಗ್ನಿಹೋತ್ರಿ ಚಾಲನೆ ನೀಡಲಿದ್ದಾರೆ ಎಂದರು.
ತದನಂತರ ಬೆಳಗ್ಗೆ 11:30ಕ್ಕೆ ಕಾರ್ಯಕ್ರಮ ಮಾಜಿ ಸಚಿವ ದಿನೇಶ ಗುಂಡುರಾವ್ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ಟ, ಆಪ್ ಮುಖಂಡ ಭಾಸ್ಕರರಾವ್ ಸೇರಿದಂತೆ ಗಣ್ಯರು ಭಾಗವಹಿಸುತ್ತಾರೆ. ಅಲ್ಲದೇ, ಕಾರ್ಯಕ್ರಮ ಸುಮಾರು 2 ಸಾವಿರ ಜನತೆ ಭಾಗವಹಿಸಲಿದ್ದಾರೆ ಎಂದರು. ಬ್ರಾಹ್ಮಣ ಸಮಾಜದ ಮುಖಂಡ ಸಿಎಂ ಆದ್ರೇ ಸಂತಸದ ಸಂಗತಿ. ಬ್ರಾಹ್ಮಣ ಸಮಾಜದವರು ಸಿಎಂ ಆಗಬೇಕು. ಇದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ ಎಂದರು.