ವಿಜಯಪುರ: ಹಿಂದುಗಳ ಮೇಲೆ ದೌರ್ಜನ್ಯಗಳು ಮುಗಿಲುಮಟ್ಟುತ್ತಿವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡರ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಹಿಂದುಗಳ ಮೇಲೆ ದೌರ್ಜನ್ಯಗಳು ನಡೆಯಿತ್ತಿವೆ. ಆದ್ರೇ, ಸರ್ಕಾರ ಮಾತ್ರ ಕಣ್ಣುಮುಚ್ಚಿಕೊಂಡಿದೆ ಎಂದು ಕಿಡಿಕಾರಿದರು. ಇನ್ನೂ ಹಿಂದುಗಳ ಮೇಲೆ ಅತ್ಯಾಚಾರ, ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದರು. ಲವ್ ಜಿಹಾದ್ ಪ್ರಕಣಗಳು ಜಾಸ್ತಿ ಆಗುತ್ತಿದೆ. ಮಂಗಳೂರು, ರಾಯಚೂರು ಸೇರಿದಂತೆ ನಾನಾ ಕಡೆಗೆ ಲವ್ ಜಿಹಾದ್ ಬೆಳಕಿಗೆ ಬಂದಿದೆ. ಮತಾಂತರ ಕೇಸ್ಗಳು ಕೂಡ ಜಾಸ್ತಿ ಆಗಿವೆ. ಲವ್ ಜಿಹಾದ್, ಮತಾಂತರಕ್ಕೆ ಕಡಿವಾಣ ಹಾಡಬೇಕಿದೆ ಎಂದರು.
ಹಿಂದೂ ರಾಷ್ಟ್ರ ಸ್ಥಾಪನೆ ಆಗಬೇಕಿದೆ. ಅಂದಾಗ ಮಾತ್ರ ಹಿಂದುತ್ವ, ಹಿಂದುಗಳ ಉಳಿಯಲು ಸಾಧ್ಯ. ಅದಕ್ಕಾಗಿ ಆಡಳಿತ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಅದಕ್ಕಾಗಿ ಫೆಬ್ರವರಿ 21ರಂದು ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಸಂಜೆ 5ಕ್ಕೆ ಹಿಂದೂ ರಾಷ್ಟ್ರ ಜಾಗೃತಿ ಸಭೆ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಹಿಂದು ಕುಟುಂಬಸ್ಥರು, ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಈಗಾಗಲೇ 20 ಲಕ್ಷ ಜನತೆಯಲ್ಲಿ ಹಿಂದೂ ಜನಜಾಗೃತಿ ಕುರಿತು ಜಾಗೃತಿ ಮೂಡಿಸಲಾಗಿದೆ. ಹಿಂದೂ ರಾಷ್ಟ್ರ ಆಗುವ ವರೆಗೂ ಹಿಂದೂ ಜಾಗೃತಿ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉದ್ಯಮಿ ಪ್ರಕಾಶ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.