ವಿಜಯಪುರ: ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಲಕ್ಷಾಂತರ ನಗದು ವಂಚನೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಕೂಡಗಿ ಕ್ವಾಟರ್ಸ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶಶಿಕಲಾ ವಟಕರಿ ಮೋಸ ಹೋದವರು. ಅನಾಮಧೇಯ ವ್ಯಕ್ತಿಯೋರ್ವನು ಕರೆ ಮಾಡಿ ನಿಮ್ಮ ಐಸಿಐಸಿಐ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡಬೇಕು ಎಂದಿದ್ದಾನೆ. ತದನಂತರ ಮೇಸಜ್ ಮಾಡಿದ್ದಾನೆ. ಇದನ್ನು ನಂಬಿ ಕೆವೈಸಿ ಅಪ್ಡೇಟ್ ಮಾಡಿದಾಗ ಖಾತೆಯಲ್ಲಿದ 9.9 ಲಕ್ಷ ಪಂಗನಾಮ ಹಾಕಿದ್ದಾನೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.