ವಿಜಯಪುರ: ಹೆತ್ತ ತಂದೆಯೋರ್ವ ತನ್ನ ಮಗ, ಮಗಳಿಗೆ ಎಗ್ರೈಸ್ನಲ್ಲಿ ವಿಷ ಬೇರಿಸಿ ಉಣ್ಣಿಸಿರುವ ಪರಿಣಾಮ ಮಗ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
ಮಗ ಶಿವರಾಜ್ ಅರಸನಾಳ್ ಸಾವನ್ನಪ್ಪಿದ್ದಾನೆ. ಇನ್ನು ರೇಣುಕಾ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಚಂದ್ರಶೇಖರ ಅರಸನಾಳ್ ವಿರುದ್ಧ ಕೇಸ್ ದಾಖಲಾಗಿದ್ದು, ಅದಕ್ಕಾಗಿ ನನ್ನ ಗಂಡನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾವಿತ್ರಿ ಅರಸನಾಳ್ ದೂರು ನೀಡಿದ್ದಾರೆ. ತಾಳಿಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.