ವಿಜಯಪುರ: ಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಮೀಸಲು ಕ್ಷೇತ್ರ ಹೊರತುಪಡಿಸಿ ಒಂದು ಕಡೆ ತಳವಾರ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ತಳವಾರ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಕಾಶ ಎಸ್. ಸೊನ್ನದ ಒತ್ತಾಯಿಸಿದರು.
ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಜಿಲ್ಲೆಯಲ್ಲಿ 25-30 ಸಾವಿರ ತಳವಾರ ಸಮುದಾಯದ ಮತಗಳಿವೆ. ಆದ್ರೂ, ನಮ್ಮ ಸಮುದಾಯ ನಿರ್ಲಕ್ಷ್ಯ ಕ್ಕೆ ಒಳಗಾಗುತ್ತಿದೆ. ಹೀಗಾಗಿ ಈ ಬಾರಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸಮುದಾಯದ ನಾಯಕರಿಗೆ ಅವಕಾಶ ಕಲ್ಪಿಸಬೇಕು. ಅಲ್ಲದೇ, ಸಿಂದಗಿಗೆ ಕ್ಷೇತ್ರಕ್ಕೆ ಜ್ಯೋತಿ ಕೋಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಹೀಗಾಗಿ ತಳವಾರ ಸಮುದಾಯಕ್ಕೆ ಯಾವ ಪಕ್ಷ ಆದ್ಯತೆ ನೀಡುತ್ತದೆ ಆ ಪಕ್ಷಕ್ಕೆ ಬೆಂಬಲಿಸುತ್ತೇವೆ ಎಂದರು.
ಮುಖಂಡರಾದ ಅಂಬಣ್ಣ ತಳವಾರ, ಶ್ರೀಮಂತ ಝಳಕಿ, ಭರತ ಕೋಳಿ ಮತ್ತಿತರರಿದ್ದರು.