ವಿಜಯಪುರ: ಆಷಾಢ ಮಾಸದಲ್ಲಿ ಮಳೆ. ಶಭಿಕ್ಷಂ ಶ್ರಾವಣದಲ್ಲಿ ಗಾಳಿ ಬಹಳ. ಅಕ್ಕಿ ಹೆರಳು ಗೋಧಿ ಹಡಿಗೆ ಬೆಳಿತಾವ ಖಾದ್ಯ ಪದಾರ್ಥಗಳು ತುಟ್ಟಿಯಾಕ್ಕಾವು. ಶುಭಕೃತನಾಮ ಸಂವತ್ಸರದಲ್ಲಿ ಸಜ್ಜನರು ಕೂಡಾ ದುರ್ಜನರಾಗ್ತಾರ ಎಂದು 2023ರ ಬಬಲಾದಿ ಸದಾಶಿವ ಕಾಲಜ್ಞಾನ ಇದಾಗಿದೆ.
ಹೌದು..! ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಸುಕ್ಷೇತ್ರ ಬಬಲಾದಿ ಮಠದ ಸಿದ್ದರಾಮಯ್ಯ ಸ್ವಾಮೀಜಿ ಭವಿಷ್ಯ ನುಡಿದ್ದಾರೆ. ಬಬಲಾದಿಯ ಜಾತ್ರೆಯಂದು ನುಡಿಯುವ ಕಾಲಜ್ಞಾನದ ಮಹಿಳೆ ಏನೆಂದ್ರೆ ಮುಂಗಾರು ಮಳೆ ಉತ್ತಮ. ಹಿಂಗಾರಿ ಮಳೆ ಉತ್ತಮ ಫಲವನ್ನು ಕೊಡ್ತದೆ. ಬೆಳೆಗಳು ಸಮೃದ್ಧಿ ವೈಶ್ಯಾಲತೆ ತಿಳಿಯರಣ್ಣಾ. ಕೆಲವೊಂದು ಕಡೆಗಳಲ್ಲಿ ಭೂಮಿ ಕುಪ್ಪಳಿಸೊದೆ ಮಕ್ಕಳಿರ್ಯಾ. ವೈಶಾಖ ಜೇಷ್ಠ ಮಾಸದಲ್ಲಿ ಸುಖ ನೆಮ್ಮದಿ ಸಿಗತೈತಿ. ಆದ್ರೇ,
ಇನ್ನಷ್ಟು ಭಾಗ ತ್ರಾಸ ಅಯ್ತಿ. ಸುಖವೂ ಇದೆ ದುಃಖ ಇದೆ ಎಂದಿದ್ದಾರೆ. ಆಳುವಂತಹ ಪ್ರಭುಗಳಿಗೆ ಸುಭೀಕ್ಷೆ ಅಯ್ತಿ. ತನ್ನಿಂದ ತಾನೇ ಹಸನಾಗತೈತಿ. ಜಾತಿ ಮತ ಬೇಧಭಾವಗಳಿಗೆ ಹೆಚ್ಚಿನ ಒಲವು ಸಿಗತೈತಿ. ಎಲ್ಲಾ ಮಕ್ಕಳಿಗೆ ತಂದೆ ತಾಯಿಗಳ ಪರ ಪ್ರೀತಿ ವಾತ್ಸಲ್ಯ, ಅನುಕಂಪ ಹೆಚ್ಚಿದೆ. ವೃದ್ದಾಶ್ರಮಗಳ ಸಂಖ್ಯೆ ಕಡಿಮೆಯಾಕ್ಕೈತಿ. ದನಪರಗಳಲ್ಲಿ ಬಂದಂತಹ ರೋಗ ಕಡಿಮೆಯಾಗುವ ಕಾಲ ಸನೀಹ ಬಂದೈತಿ ಎಂದರು.