ವಿಜಯಪುರ: ಅನಾಮಧೇಯ ವ್ಯಕ್ತಿಯ ಹತ್ಯೆಗೈದಿದ್ದ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ಗೋದಾವರಿ ಹೋಟೆಲ್ ಬಳಿ ಬುಧವಾರ ನಡೆದಿದೆ. ತಾನಾಜಿ ಕೋಳಿ, ಮಹಾಂತೇಶ ನಿಡೋಣಿ ಬಂಧಿತ ಆರೋಪಿಗಳು. ಹತ್ಯೆಗೆ ಬಳಸಿದ ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ: 7/11/2022ರಂದು ಆಟೋದಲ್ಲಿ ಕರೆದುಕೊಂಡು ಹೋಗಿ ಅನಾಮಧೇಯ ವ್ಯಕ್ತಿಯ ಮೇಲೆ ಆರೋಪಿಗಳು ಹಲ್ಲೆಗೈದು ತದನಂತರ ಆತನನ್ನು ಇಟ್ಟಂಗಿಹಾಳ ಬಳಿ ಎಸೆದು ಎಸ್ಕೇಪ್ ಆಗಿದ್ದರು. ಘಟನಾ ಸ್ಥಳಕ್ಕೆ ಪಿಎಸ್ಐ ಜಿ.ಎಸ್. ಉಪ್ಪಾರ ಭೇಟಿ ನೀಡಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು. ಆರೋಪಿಗಳ ಸುಳಿವು ಸಿಗದೇ ಕ್ಲಿಸ್ಟ್ಕರ ಕೇಸ್ ಎಂದು ಕೈ ಬಿಡುವ ವೇಳೆ ಖಡಕ್ ಪಿಎಸ್ಐ ಉಪ್ಪಾರ ತನಿಖೆಯ ಇಂಚಿಂಚು ಮಾಹಿತಿ ಮತ್ತೇ ಆರಂಭಿಸಿದ್ದಾಗ ಮಹತ್ವದ ಸುಳಿವು ಸಿಕ್ಕಿದೆ. ಅದಕ್ಕಾಗಿ ಖಚಿತ ಮಾಹಿತಿ ಆಧರಿಸಿ ಗೋದಾವರಿ ಹೋಟೆಲ್ ಬಳಿ ದಾಳಿಗೈದು ಆರೋಪಿಗಳ ಲಾಕ್ ಮಾಡಿದ್ದಾರೆ. ತದನಂತರ ಪೊಲೀಸ್ ತನಿಖೆ ವೇಳೆ ಹಲ್ಲೆ, ಹತ್ಯೆಯ ಮಾಹಿತಿ ಹೊರ ಹಾಕಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.