ವಿಜಯಪುರ: ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಶುಕ್ರವಾರ ರಾತ್ರಿ 10-32ಕ್ಕೆ ಭೂಕಂಪನ ಸಂಭವಿಸಿದೆ. ಭೂಮಿ ನಡುಗುತ್ತಲೇ ಮನೆಗಳಲ್ಲಿ ಮಲಗಿದ್ದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ತಗಡಿನ ಶೆಡ್ ಗಳಂತೂ ಭಾರಿ ಶಬ್ದ ಸೃಷ್ಟಿಸಿದ್ದು, ಮನೆಗಳಲ್ಲಿನ ಪಾತ್ರೆ ಸೇರಿದಂತೆ ಇತರೆ ವಸ್ತುಗಳು ನೆಲಕ್ಕೆ ಉರುಳಿವೆ. ಭೂಕಂಪನಕ್ಕೂ ಮುನ್ನ ಗ್ರಾಮಗಳಲ್ಲಿನ ನಾಯಿಗಳು ವಿಚಿತ್ರವಾಗಿ ಬೊಗಳಿದ್ದು, ಕೆಲವೇ ಕ್ಷಣದಲ್ಲಿ ಭೂಮಿ ಕಂಪಿಸಿದೆ.