ಹುಬ್ಬಳ್ಳಿ: ಕಳ್ಳನೋರ್ವ ಹಾಡಹಗಲೇ ಆಟೋದಲ್ಲಿದ್ದ ನಗದು ಹಾಗೂ ಪೆನ್ ಡ್ರೈವ್ ಕದ್ದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಗಬ್ಬೂರ ರಸ್ತೆಯಲ್ಲಿರುವ ಅಂಜುಮನ್ ಶಾದಿ ಹಾಲ್ ಬಳಿ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮೊಹಮ್ಮದ್ ಗೌಸ್ ಗೌಳಿ ಎಂಬಾತನಿಗೆ ಸೇರಿದ ಆಟೋ ಇದಾಗಿದೆ. ಆಟೋ ಚಾಲಕ ಟೀ ಕುಡಿಯಲು ತೆರಳಿದ್ದ ವೇಳೆ ಆಟೋದಲ್ಲಿದ್ದ 6,300 ನಗದು ಹಾಗೂ ಒಂದು ಪೆನ್ ಡ್ರೈವ್ ಕಳ್ಳತನ ಆಗಿದೆ. ಈ ಕುರಿತಂತೆ ಆಟೋ ಚಾಲಕ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.