ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಮರ್ಡರ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಬೈರಗೊಂಡ ಸೇರಿ 7 ಆರೋಪಿಗಳು ವಿಜಯಪುರ ನ್ಯಾಯಾಲಯಕ್ಕೆ ಹಾಜರಾದರು. 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಮಹಾದೇವ ಬೈರಗೊಂಡ ಅವರ ಗ್ಯಾಂಗ್ ಹಾಜರು ಪಡೆಸಿದರು. ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ ಕೌಂಟರ್ನಲ್ಲಿ ಮುಖ್ಯ ಆರೋಪಿ ಅಂದಿನ ಚಡಚಣ ಪಿಎಸ್ಐ ಗೋಪಾಲ್ ಹಳ್ಳೂರ, ಶಿವಾನಂದ ಬಿರಾದಾರ ಸೇರಿ 7 ಆರೋಪಿಗಳು ಹಾಜರಿದ್ದರು. 2017 ಅಕ್ಟೋಬರ್ 30 ರಂದು ನಡೆದಿದ್ದ ಹಂತಕ ಧರ್ಮರಾಜ್ ಚಡಚಣ ಹಾಗೂ ಸಹೋದರ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಭಾಗಿ ಹಿನ್ನೆಲೆ ಕೋರ್ಟ್ಗೆ ಹಾಜರಾದರು. ಅದಕ್ಕಾಗಿ ಕೋರ್ಟ್ ಎದುರು ಡಿ ಆರ್ ಪೊಲೀಸ್ ವ್ಯಾನ್ ನಿಯೋಜನೆ ಮಾಡಲಾಗಿತ್ತು.