ವಿಜಯಪುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ಹಳೆ ರಿಮ್ಯಾಂಡ್ ಹೋಂ ಹತ್ತಿರ ತಡವಾಗಿ ಬೆಳಕಿಗೆ ಬಂದಿದೆ. ವಿಶಾಲ ಚವ್ಹಾಣ, ಜಂಪು ಚವ್ಹಾಣ ಬಂಧಿತ ಆರೋಪಿಗಳು. ಇನ್ನು ಅಕ್ರಮವಾಗಿ ಸಾರ್ವಜನಿಕರ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದು 16820 ಮೌಲ್ಯದ ಗಾಂಜಾ ಹಾಗೂ ನಗದು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.