ವಿಜಯಪುರ: ಪ್ರಪ್ರಥಮ ಬಾರಿಗೆ ವಿಜಯಪುರ ಜಿಲ್ಲೆಯಲ್ಲಿ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಫೆ.4 ಮತ್ತು 5 ರಂದು ವಿಜಯಪುರದ ಶ್ರೀಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ತಿಳಿಸಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦.೩೦ಕ್ಕೆ ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದರು.
ಸಚಿವ ಗೋವಿಂದ ಕಾರಜೋಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಚಿವ ಮುರುಗೇಶ ನಿರಾಣಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ಛಾಯಾಚಿತ್ರ ಪ್ರದರ್ಶನ, ನಗರ ಶಾಸಕರ ಬಸನಗೌಡ ಪಾಟೀಲ (ಯತ್ನಾಳ) ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ವಹಿಸಲಿದ್ದಾರೆ. ಶಾಸಕರುಗಳಾದ ಎ.ಎಸ್ ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ, ರಮೇಶ ಭೂಸನೂರ, ದೇವಾನಂದ ಚೌವ್ಹಾಣ, ಪಿ.ಎಚ್ ಪೂಜಾರ, ಹಣಮಂತ ನಿರಾಣಿ, ಮುಖಂಡರಾದ ವಿಜುಗೌಡ ಪಾಟೀಲ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ವಾರ್ತಾ ಇಲಾಖೆಯ ಆಯುಕ್ತರಾದ ಡಾ|| ಪಿ ಎಸ್ ಹರ್ಷ, ಜಿಲ್ಲಾಧಿಕಾರಿ ಡಾ|| ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ. ಸಿಇಒ ರಾಹುಲ ಶಿಂದೆ, ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಫೆ.೪ ರಂದು ಮಧ್ಯಾಹ್ನ ೨ಕ್ಕೆ ನವ ಮಾಧ್ಯಮಗಳು ಮತ್ತು ಪತ್ರಕರ್ತರು ಎಂಬ ವಿಚಾರಗೋಷ್ಠಿಯನ್ನು ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಪತ್ರಿಕೆ ಸಂಪಾದಕ ರವಿ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಹಿರಿಯ ಪತ್ರಕರ್ತ ಅನಂತ ಚಿನಿವಾರ ಉದ್ಘಾಟಿಸುವರು. ಜಿ.ಎಂ.ಕುಮಾರ, ಕೆ.ದೀಪಕ್ ಮೈಸೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಕ್ಷಿö್ಮನಾರಾಯಣ, ಸಂಗಮೇಶ ಮೆಣಸಿನಕಾಯಿ, ತೇಜಸ್ವಿನಿ ಹಾಗೂ ಗೋಪಾಲ ನಾಯಕ ಅವರುಗಳು ಗೋಷ್ಠಿಯ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ.
ಗಡಿ ಭಾಗದಲ್ಲಿ ಮಾಧ್ಯಮ ಗೋಷ್ಠಿಯನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಉದ್ಘಾಟಿಸಲಿದ್ದು, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಬಿ.ಎಮ್ ಹನೀಫ್, ಹಾಗೂ ಕೀರ್ತಿ ಶೇಖರ ಕಾಸರಗೋಡು ಭಾಗವಹಿಸಲಿದ್ದು, ಅಪ್ಪಾರಾವ್ ಸೌದಿ, ಸವಿತಾ ಜಯಂತ್, ವೆಂಕಟಸಿಂಗ್ ಹಾಗೂ ಕುಂದೂರು ಉಮೇಶ್ ಭಟ್ಟ ಅವರುಗಳು ಗೋಷ್ಠಿಯ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ. ಸಾಯಂಕಾಲ ೫:೩೫ ಗಂಟೆಗೆ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಈ ಸಮಾವೇಶದಲ್ಲಿ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ, ರಾಜ್ಯದ ಎಲ್ಲಾ ಪತ್ರಕರ್ತ ಸದಸ್ಯರು ಈ ಸಮಾವೇಶದಲ್ಲಿ ಭಾಗವಹಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದರು. ರಾತ್ರಿ ಸುಮಾರು ಹೊತ್ತಿನವರೆಗೆ ಸಾಂಸ್ಕೃತೀಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ.೫ ರಂದು ಬೆಳಿಗ್ಗೆ ಸುದ್ದಿ ಮನೆ ಮತ್ತು ಪತ್ರಿಕಾ ವಿತರಕರ ಕುರಿತ ಗೋಷ್ಠಿಯನ್ನು ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಉದ್ಘಾಟಿಸುವರು. ಐಎಫ್ ಡಬ್ಲ್ಯೂಜೆ ಸಂಚಾಲಕ ಎಚ್.ಬಿ.ಮದನಗೌಡ ಅಧ್ಯಕ್ಷತೆ ವಹಿಸುವರು. ಮಾಧ್ಯಮ ಅಕಾಡೆಮಿ ಸದಸ್ಯರಾದ ಸಿ.ಕೆ.ಮಹೇಂದ್ರ, ಕೆ.ವಿ.ಶಿವಕುಮಾರ್, ದೇವೇಂದ್ರಪ್ಪ ಕಪನೂರ, ಜಗನ್ನಾಥ ಶೆಟ್ಟಿ ಬಾಳ, ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಭಾಗವಹಿಸುವರು ಎಂದರು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಟೆಲೆಕ್ಸ್ ಎನ್ ರವಿಕುಮಾರ ಮಾಡಲಿದ್ದಾರೆ. ಸುದ್ದಿ ಮನೆ ಮತ್ತು ಮಹಿಳೆಯರು ಗೋಷ್ಠಿಯನ್ನು ಕಸ್ತೂರಿ ಸಂಪಾದಕಿ ಶಾಂತಲಾ ಧರ್ಮರಾಜ್ ಉದ್ಘಾಟಿಸುವರು. ಪತ್ರಕರ್ತರಾದ ಆಯೇಶಖಾನಂ, ಬಿ.ಕೆ.ಸುಮತಿ, ಕೆ.ಬಿ.ಶುಭ, ಸವಿತಾ ರೈ, ಸುಧಾರಾಣಿ, ಶೀಲಾ ಪ್ರತಾಪ ಸಿಂಹ ತಿವಾರಿ, ಎಂ.ಆರ್.ಸತ್ಯನಾರಾಯಣ ಅವರುಗಳು ಗೋಷ್ಠಿಯ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ.
ಫೆ.೫ರ ಮಧ್ಯಾಹ್ನ ೧.೪೫ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು, ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಚಿವ ಜೆ.ಸಿ.ಮಾಧುಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದು, ಇದೇ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಚಿವರಾದ ಆರ್.ಅಶೋಕ್, ಶಶಿಕಲಾ ಜೊಲ್ಲೆ, ಡಾ.ಕೆ.ಸುಧಾಕರ, ಮಾಜಿ ಸಚಿವರುಗಳಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭಾಗವಹಿಸುವರು
ಶಾಶಕರುಗಳಾದ ಯಶವಂತ್ರಾಯಗೌಡ ಪಾಟೀಲ, ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಪ್ರಕಾಶ ಹುಕ್ಕೆರಿ, ಮಾಜಿ ಶಾಕರುಗಳಾದ ರಾಜು ಆಲಗೂರ, ಡಾ| ಮಕ್ಬುಲ್ ಬಾಗವಾನ, ವಿಠ್ಠಲ ಕಟಕದೊಂಡ, ಮುಖಂಡುಗಳಾದ ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ ಅವರು ಭಾಗವಹಿಸಲಿದ್ದಾರೆ.
ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಸಮ್ಮೇಳನದ ಹತ್ತಿರದ ಸ್ಥಳದಲ್ಲಿಯೇ ನೋಂದಣಿ ಮಾಡಲಾಗುವದು, ಅಲ್ಲಿ ೩ಜಿಲ್ಲೆಗೆ ಒಂದರAತೆ ೧೦ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ ಎಂದು ನೋಂದಣಿ ಸಮಿತಿಯ ಡಿ.ಬಿ.ವಡವಡಗಿ ಅವರು ಹೇಳಿದರು.
ವಸತಿ ಸಮಿತಿಯ ಪ್ರಭಹುಮಲ್ಲಿಕಾರ್ಜುನಮಠ ಮಾತನಾಡಿ, ಪ್ರಶಸ್ತಿಪುರಸ್ಕೃತರಿಗೆ ಸೇರಿ ಹೊರಗಿನ ಎಲ್ಲ ಪ್ರತಿನಿಧಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಲಾಗಿದೆ. ನಗರದ ಹೋಟೆಲ್ ಮಾಲೀಕರು ಸಂಪೂರ್ಣವಾಗಿ ಸಹಕರಿಸಿದ್ದಾರೆ ಎಂದರು. ೬ರಂದು ಪ್ರತಿನಿಧಿಗಳಿಗೆ ಜಿಲ್ಲಾ ಪ್ರವಾಸವನ್ನು ಕೂಡಾ ಕೈಕೊಳ್ಳಲಾಗಿದೆ. ಪತ್ರಿಕಾ ಗೊಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೀಜಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಬಿ.ವಡವಡಗಿ, ಉಪಾದ್ಯಕ್ಷರಾದ ಇಂದುಶೇಖರ ಮಣೂರ, ಫಿರೋಜ್ ರೋಜಿನಾದಾರ, ವಸತಿ ಸಮಿತಿ ಪ್ರಭು ಮಲ್ಲಿಕಾರ್ಜುನ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ ಕೌಶಲ್ಯ ಪನಾಳಕರ, ಕೆ.ಕೆ. ಕುಲಕರ್ಣಿ, ರಾಹುಲ್ ಆಪ್ಟೆ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.