ವಿಜಯಪುರ: ಯುವಕನ ಶವವೊಂದು ಹಾಸ್ಟೆಲ್ ಪಕ್ಕದಲ್ಲಿ ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ಟೆಕ್ಕೆ ಬಳಿ ರವಿವಾರ ಪತ್ತೆಯಾಗಿದೆ. 25 ವರ್ಷದ ಸುನೀಲ ಯಾರವಾರ ಎಂಬ ಯುವಕನ ಶವ ಪತ್ತೆಯಾಗಿದೆ. ಅಲ್ಲದೇ, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇನ್ನೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದಕ್ಕಾಗಿ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.