ಬೆಳಗಾವಿ: ರೈತರಿಗೆ ಕೆಇಬಿಯಿಂದ ಸರಿಯಾಗಿ ಸಹಕಾರ ಸಿಗುತ್ತಿಲ್ಲ. ಅದಕ್ಕಾಗಿ ರೈತರ ವಿವಿಧ ಬೇಡಿಕೆಗಳನ್ನ ಈಡೇರಿಸಬೇಕು ಎಂದು ನೇಗಿಲ ಯೋಗಿ ರೈತ ಸಂಘದಿಂಧ ಆಗ್ರಹಿಸಿದರು. ಬೆಳಗಾವಿ ಜಿಲ್ಲೆಯ ಖಾನಾಪೂರ ಪಟ್ಟಣದ ಕೆಇಬಿ ಎಇಇ ಕಚೇರಿಗೆ ನೇಗಿಲ ಯೋಗಿ ರೈತ ಸಂಘದ ಅದ್ಯಕ್ಷರಾದ ಶ್ರೀ ರುದ್ರಗೌಡ ಪಾಟೀಲ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು. ಈ ವೇಳೆ ರುದ್ರಗೌಡ ಪಾಟೀಲ ಮಾತನಾಡಿ, ಬೇಸಿಗೆ ಇರುವದರಿಂದ ದಿನಕ್ಕೆ ಎಳು ಗಂಟೆ ವಿದ್ಯುತ್ ಪೂರೈಸಬೇಕು. ರೈತರ ಜಮೀನಿನಲ್ಲಿ ಅಳವಡಿಸಿದ ಟಿಸಿಗಳಿಗೆ ಸಮಸ್ಯೆಯಾದ್ರೆ ತಕ್ಷಣವೇ ರಿಪೇರಿ ವ್ಯವಸ್ಥೆ ಮಾಡಬೇಕು. ಹಳೆಯ ವಿದ್ಯುತ್ ಕಂಬಗಳನ್ನು ತೆರುವುಗೊಳಿಸಬೇಕು ಎಂದು ಒತ್ತಾಯಿಸಿದರು. ರೈತನ ಬೆಳೆಯುವ ಬೆಳೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಸರಕಾರದ ಆದೇಶವಿದ್ದು, ಅಧಿಕಾರಿಗಳು ನಿರ್ಲಕ್ಷ್ಯಸುತ್ತಿದ್ದಾರೆ. ಕಾರಣ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನ ಈಡೇರಿಸಬೇಕು ಎಂದು ಕಿಡಿಕಾರಿದರು.