ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಮತ್ತು 14- ಹಿರೇಮುರಾಳ ಗ್ರಾಮ ಪಂಚಾಯಿತಿಗಳು, ತಾಳಿಕೋಟಿ ತಾಲೂಕಿನ 4- ಹಿರೂರ ಗ್ರಾಮ ಪಂಚಾಯಿತಿ ಹಾಗೂ ಚಡಚಣ ತಾಲೂಕಿನ 9- ದೇವರ ನಿಂಬರಗಿ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಯುಧ ಲೈಸನ್ಸದಾರರು ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳು ಅಂದರೆ ಎಸ್ ಬಿ ಬಿ ಎಲ್ -ಡಿ ಬಿ ಬಿ ಎಲ್ ಬಂದೂಕು ರೈಫಲ್, ರಿವಾಲ್ವರ್ ಹಾಗೂ ಪಿಸ್ತೂಲುಗಳನ್ನು ಹೊಂದಲು ಕೊಟ್ಟ ಲೈಸೆನ್ಸ್ ಗಳನ್ನು ದಿನಾಂಕ 08-02-2023 ರಿಂದ ದಿನಾಂಕ 28-02-2023ರ ಅವಧಿಯವರೆಗೆ ಸ್ಥಗಿತಗೊಳಿಸಿ ಆದೇಶಿಸಲಾಗಿದ್ದು, ಶಸ್ತ್ರಾಸ್ತ್ರ ಹೊಂದಿದವರು ತಕ್ಷಣವೇ ಸಮೀಪದ ಪೆÇಲೀಸ್ ಠಾಣೆಯಲ್ಲಿ ಎಲ್ಲ ಶಸ್ತ್ರಾಸ್ತ್ರಗಳನ್ನು ಮದ್ದುಗುಂಡುಗಳನ್ನು ಜಮೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರು ಆದೇಶ ಹೊರಡಿಸಿದ್ದಾರೆ.
ಈ ಆದೇಶವು 08-2-2023 ರಿಂದ 28-02-2023ರ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಎಲ್ಲಾ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದು ಗುಂಡುಗಳನ್ನು ಸಂಬಂಧಿಸಿದ ಲೈಸೆನ್ಸದಾರರಿಗೆ ದಿನಾಂಕ :29-2-2023 ರಂದು ಮರಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.