ಬೀದರ್: ಗಾಂಜಾ ಸೇದಬಾರದು ಎಂದು ಬುದ್ಧಿ ಹೇಳಿದಕ್ಕೆ ಹಣ್ಣಿನ ವ್ಯಾಪಾರಿಯ ಅಂಗಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಘಟನೆ ಬೀದರ ಜಿಲ್ಲೆಯ ಚಿಟ್ಟಗುಪ್ಪಾ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರ ನಡೆದಿದೆ.
ಮಹಮ್ಮದ್ ರಫಿಕ್ ಎಂಬುವರ ಅಂಗಡಿ ಭಸ್ಮವಾಗಿದೆ. ಇನ್ನು ಕಳೆದ ರಾತ್ರಿ ಅಂಗಡಿ ಪಕ್ಕದಲ್ಲಿರುವ ದರ್ಗಾದ ಕಟ್ಟೆಯ ಮೇಲೆ ಕುಳಿತು ಯುವಕರು ಗಾಂಜಾ ಸೇವನೆ ಮಾಡುತ್ತಿದ್ದರು. ಧಾರ್ಮಿಕ ಸ್ಥಳವಾದ ಪವಿತ್ರ ದರ್ಗಾ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುವದು ತಪ್ಪು ಎಂದು ಬುದ್ಧಿವಾದ ಹೇಳಿದ್ದಾರೆ.
ಅದಕ್ಕಾಗಿ ಅಂಗಡಿ, ದ್ವಿಚಕ್ರ ವಾಹಾನ ಸೇರಿದಂತೆ ಸುಮಾರು ಮೂರು ಲಕ್ಷ ಐವತ್ತು ಸಾವಿರ ರೂಪಾಯಿ ಮೌಲ್ಯ ವಸ್ತುಗಳನ್ನು ಬೆಂಕಿಗಾಹುತಿ ಆಗಿದೆ. ತಪ್ಪಿತಸ್ಥ ವಿರುದ್ಧ ಕ್ರಮಕ್ಕೆ ಅಂಗಡಿ ಮಾಲೀಕರ ಆಗ್ರಹಿಸಿದ್ದಾರೆ.