ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ ಶಿಷ್ಯ ಸುಶೀಲ ಕಾಳೆ ಹತ್ಯೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ವಿಜಯಪುರ ನಗರದ ಎಸ್ ಎಸ್ ಕಾಂಪ್ಲೆಕ್ಸ್‌ನಲ್ಲಿ ಜುಲೈ 14ರಂದು ಸುಶೀಲ ಕಾಳೆನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ಬಗ್ಗೆ ಇಂಚಿಂಚು ಮಾಹಿತಿಯನ್ನು ಸಿಸಿಟಿವಿ ವಿಡಿಯೋ ನೀಡಿದೆ. ಸುಶೀಲ ಕಾಳೆನ್ನು ಮಚ್ಚು, ಚಾಕುವಿನಿಂದ ಹತ್ಯೆ ಮಾಡಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದು ಕಾಳೆ ಒದಾಡಿದ್ದಾನೆ. ಆದ್ರೂ ಹಂತಕರು ಬಿಡದೇ ಹತ್ಯೆ ಮಾಡಿದ್ದಾರೆ. ಈಗಾಗಲೆ ಆರು ಜನ ಆರೋಪಿಗಳನ್ನು ಗಾಂಧಿಚೌಕ್ ಪೊಲೀಸರು ಬಂಧಿಸಿದ್ದಾರೆ.