ವಿಜಯಪುರ: ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಕೇಸ್ನಲ್ಲಿ ಕೋರ್ಟ್ ತೀರ್ಮಾನವೇ ಅಂತಿಮ ತೀರ್ಮಾನ ಎಂದು ವಿಜಯಪುರದ ಚಿಕ್ಕಗಲಗಲಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಲೋಕಾಯುಕ್ತನವರು ತೀವ್ರಗತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ಯಾವುದನ್ನು ಮುಚ್ಚಿ ಇಡುವ ಪ್ರಶ್ನೆ ಬರೋದಿಲ್ಲ. ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಆರೋಪ ಮಾಡುವುದರಿಂದ ಅವರ ಭ್ರಷ್ಟಾಚಾರ ತೊಳೆದು ಹೋಗಲ್ಲ. ಕಾಂಗ್ರೆಸ್ ನವರು ಮಾಡಿರುವ ಪಾಪ ತೊಳೆದು ಹೋಗಲ್ಲ. ಕಾಂಗ್ರೆಸ್ನವರ ಭ್ರಷ್ಟಾಚಾರದ ಕುರಿತಿ ಲೋಕಾಯುಕ್ತಕ್ಕೆ ಕೊಡುತ್ತೇವೆ ಎಂದರು. ಬಿಜೆಪಿಯಲ್ಲಿ ಎಲ್ಲರಿಗೂ ಟಿಕೆಟ್ ನೀಡಲು ಆಗಲ್ಲ. ಸಂಸದೀಯ ಮಂಡಳಿಯ ಸದಸ್ಯರು ಇದ್ದಾರೆ. ವಿವರವಾಗಿ ಚರ್ಚೆ ಮಾಡಲಾಗುತ್ತದೆ. ಯಾವುದೇ ಚುನಾವಣೆಯಲ್ಲಿ ಎಲ್ಲರಿಗೂ ಟಿಕೆಟ್ ಕೊಟ್ಟಿರುವ ಉದಾಹರಣೆ ಇಲ್ಲ. ಸರ್ವೇ, ವರ್ಕ್, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂದರು. ಇನ್ನೂ ಪಾಪ ಡಿಕೆಶಿ, ಆ ಪುಣ್ಯಾತ್ಮ ತಮ್ಮ ಭ್ರಷ್ಟಾಚಾರ ಅವರಿಗೆ ಬಿಡಲಾರದ ನಂಟು ಇದೆ. ಮೊದಲು ಅವರು ಮೇಲಿರುವ ಆರೋಪಗಳಿಗೆ ಸ್ಪಷ್ಟನೆ ನೀಡಲಿ ಎಂದರು.