ವಿಜಯಪುರದಲ್ಲಿ ಜುಲೈ 19ಕ್ಕೆ ಪತ್ರಿಕಾ ದಿನಾಚರಣೆ

Karnataka 1 News
ವಿಜಯಪುರದಲ್ಲಿ ಜುಲೈ 19ಕ್ಕೆ ಪತ್ರಿಕಾ ದಿನಾಚರಣೆ

ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ಪತ್ರಕರ್ತರಿಗೆ ಸನ್ಮಾನ ಸಮಾರಂಭ ಜುಲೈ ೧೯ ರಂದು – ಪ್ರಕಾಶ ಬೆಣ್ಣೂರ
ವಿಜಯಪುರ: ಜಿಲ್ಲೆಯ ಹಿರಿಯ ಪತ್ರಕರ್ತರ ರಿಗೆ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪತ್ರಿಕಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಜುಲೈ ೧೯ ರಂದು ಶನಿವಾರ ಬೆಳಿಗ್ಗೆ ೧೦ ಕೈ ವಿಜಯಪುರ ನಗರದ ಕಂದಗಲ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬೆಣ್ಣೂರ ಹೇಳಿದರು,
ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಸಂಘದ ಎಲ್ಲ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು,
ಜಿಲ್ಲಾಪಂಚಾಯತ್ ರಸ್ತೆಯ ಪತ್ರಿಕಾ ಭವನದಲ್ಲಿ ತುರ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದವರು ೨೦೨೪/೨೫ ನೇ ಸಾಲಿನಲ್ಲಿ ಎಸ್‍.ಎಲ್‍.ಸಿ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಪತ್ರಕರ್ತರರ ಮಕ್ಕಳು ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿ /ವಿಧ್ಯಾರ್ಥಿನಿ ಪ್ರತಿಭಾ ಪುರಸ್ಕಾರ ಹಾಗೂ ಪತ್ರಿಕಾ ದಿನಾಚರಣೆ ಮತ್ತು ಜಿಲ್ಲೆಯ ಹಿರಿಯ ಪತ್ರಕರ್ತರ ರಿಗೆ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಸಮಾರಂಭವನ್ನು ಜುಲೈ ೧೯ ರಂದು ಶನಿವಾರ ಬೆಳಿಗ್ಗೆ ೧೦ ಕೈ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ್. ಹಾವೇರಿ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲವರ ಸಂಸದ ರಮೇಶ್ ಜಿಗಜಿಣಗಿ, ವಿಜಾಪುರದ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ್) ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕೆ.ವ್ಹಿ. ಪ್ರಭಾಕರ, ಕೆ ಯು ಡಬ್ಲ್ಯೂ ಜೆ
ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ ಲೋಕೇಶ, ಉಪಾಧ್ಯಕ್ಷರಾದ ಪುಂಡಲೀಕ ಬಾಳೊಜಿ , ಭವಾನಿಸಿಂಗ ಠಾಕೂರ, ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ,
ವಿಶೇಷ ಉಪನ್ಯಾಸ ಕರಾಗಿ ಹಿರಿಯ ಪತ್ರಕರ್ತರಾದ ಗೋಪಾಲ ನಾಯಕವರು ಉಪನ್ಯಾಸ ನೀಡಲಿದ್ದಾರೆ,
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಾದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿ ರೀಷಿ ಆನಂದ, ಡಿವೈಎಸ್ಪಿ ಬಸವರಾಜ ಎಲಿಗಾರವರಿಗೆ ವಿಶೇಷ ಸನ್ಮಾನ ಮಾಡಲಾಗುವುದು
ಗ್ರಾಮೀಣ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುವ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಉಚಿತ ಬಸ್ ಪಾಸ್ ವಿತರಣೆಗೆ ಸಹಕರಿಸಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ಕೆ ಯು ಡಬ್ಲ್ಯೂ ಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸೇರಿದಂತೆ ಅನೇಕರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗುವುದು
ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪುರಸ್ಕೃತ : ವಿಜಯಪುರ ಘಟಕದಿಂದ ಮಹಿಳಾ ವಿಭಾಗದಿಂದ ಶ್ರೀಮತಿ ಸರೋಜಿನಿ ಕುಲಕರ್ಣಿ( ಕನ್ನಡ ಕೋಗಿಲೆ )ಪರಶುರಾಮ್ ಶಿವಶರಣ,( ಹೊಸದಿಗಂತ,) ನವೀನ್ ಅಂಜುಮ್ ಮಮದಾಪುರ, ,(ಸಂಯುಕ್ತಕರ್ನಾಟಕ), ವಿನೋದ್ ಸಾರವಾಡ, (ರಣರಂಗ,) ಶರಣಬಸಪ್ಪ ಮಸಳಿ,( ಕರುನಾಡುಪ್ರಭ, )ಅಪ್ಪು ಚಿನಗುಂಡಿ, (ಸುವರ್ಣ ಟಿವಿ ವಾಹಿನಿಯ ಕ್ಯಾಮೆರಾ ಮ್ಯಾನ,) ಗುರಪ್ಪ ಲೋಕುರಿ (ವಿಜಯವಾಣಿ)
ಸಿಂದಗಿಯ ಮಲ್ಲಿಕಾರ್ಜುನ ಅಲ್ಲಾಪುರ (ವಿಶ್ವವಾಣಿ,) ಬಸವನಬಾಗೇವಾಡಿಯ ಮಂಜು ಕಲಾಲ(,ವಿಶ್ವವಾಣಿ) ಕೊಲ್ಹಾರದ ಮಲ್ಲಿಕಾರ್ಜುನ ಕುಬಕಡ್ಡಿ, (ಕನ್ನಡ ಪ್ರಭ,) ನಿಡಗುಂದಿಯ ಬಸಲಿಂಗಯ್ಯ ಮಠಪತಿ, (ಹೊಸದಿಗಂತ), ಇಂಡಿಯ ಬೀರಪ್ಪ ಹೊಸೂರ,( ರವಿವಾಣಿ,) ಅಲಮೇಲದ ಗುರು ಹಿರೇಮಠ, (ವಿಜಯ ಕರ್ನಾಟಕ, )ತಿಕೋಟಾದ ಶ್ರೀಮತಿ ಲಕ್ಷ್ಮಿ ಹಿರೇಮಠ (ಸಂಯುಕ್ತ ಕರ್ನಾಟಕ,) ದೇವರಹಿಪ್ಪರಗಿಯ ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ, (ಕನ್ನಡಪ್ರಭ, )ಚಡಚಣದ ಶಿವಯ್ಯ ಮಡಪತಿ, (ಉದಯವಾಣಿ,) ಮುದ್ದೇಬಿಹಾಳದ ನೂರ್ ನಬಿ ನದಾಫ, (ಗುಮ್ಮಟಿನಗರ, )ತಾಳಿಕೋಟೆಯ ಶಿವಾನಂದ್ ಸಜ್ಜನ,( ವಿಜಯಕರ್ನಾಟಕ), ಸೇರಿದಂತೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ೧೭ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು,
ಕೆ ಯು ಡಬ್ಲ್ಯೂ ಜೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಉಪಾಧ್ಯಕ್ಷ ಇಂದುಶೇಖರ್ ಮಣ್ಣೂರ, ರಾಷ್ಟ್ರೀಯಮಂಡಳಿಯ ಮಹೇಶ್ ಶೆಟ್ಟಿಗಾರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಬಿ.ವಡವಡಗಿ, ನಾಮನಿರ್ದೇಶನ ಸದಸ್ಯರಾದ ಕೌಶಲ್ಯ ಪನಾಳಕರ, ಕೆ.ಕೆ. ಕುಲಕರ್ಣಿ, ಖಜಾಂಜಿ ರಾಹುಲ್ ಆಪ್ಟೆ, ಅಶೋಕ್ ಯಡಹಳ್ಳಿ, ಗುರು ಗದ್ದನಕೇರಿ, ಬಸವರಾಜ ಉಳ್ಳಾಗಡ್ಡಿ, ಇರ್ಫಾನ್ ಶೇಖ, ಶಶಿಕಾಂತ್ ಮೇಂಡೆಗಾರ, ಶರಣು ಮಸೂಳಿ, ಗುರು ಲೋಕುರಿ, ಮಲ್ಲು ಕೆಂಭಾವಿ ,ನಾಗೇಶ್ ನಾಗೂರ್, ಮಹ್ಮದ ಸಮೀರ ಇನಾಮದಾರ, ಹಾಗೂ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು,

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";