ವಿಜಯಪುರ: ನಾಲ್ಕು ತಂಡಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಾಲ್ಕು ದಿಕ್ಕಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿದೆ. ಇದು ಬದಲಾವಣೆಯ ದಾರಿಯಾಗಿದ್ದು, ಭಾರೀ ರೆಸ್ಪಾನ್ಸ್ ಸಿಕ್ಕಿದೆ ಎಂದರು. ಅಲ್ಲದೇ, ಪ್ರಧಾನಿ ಮೋದಿ ಅವರ ಎಂಟು ವರ್ಷದ ಸಾಧನೆಯನ್ನು ಇದೀಗ ಜನ್ರ ಮುಂದೆ ಇಡುತ್ತಿದ್ದೇವೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳಿಂದ ನಮಗೆ ಬೆಂಬಲ ಸಿಕ್ಕಿದೆ. ಫಲಾನುಭವಿಗಳ ಸಮಾವೇಶದಲ್ಲಿ 40ರಿಂದ 50 ಸಾವಿರ ಫಲಾನುಭವಿಗಳು ಇರ್ತಾರೆ ಎಂದ್ರೆ ಸರ್ಕಾರದ ಸಾಧನೆ ಗೊತ್ತಾಗಲಿದೆ. 14 ನೇ ಸ್ಥಾನದಿಂದ ಭಾರತ 5ನೇ ಸ್ಥಾನಕ್ಕೆ ಬಂದಿದೆ ಅಂದ್ರೆ ಭಾರತದ ಸಾಧನೆ ಹೇಗಿದೆ ಎಂಬುದು ಗೊತ್ತಾಗಿದೆ.
ಕರೋನಾ ಸಂದರ್ಭದಲ್ಲಿ ಎಲ್ಲ ದೇಶಗಳಲ್ಲಿ ಚಟುವಟಿಕೆಗಳು ಸ್ಥಗಿತವಾಗಿವೆ. ಆದ್ರೆ, ಭಾರತದಲ್ಲಿ ಅದನ್ನು ನಿಯಂತ್ರಣ ಮಾಡುವ ಕೆಲಸ ಮೋದಿ ಮಾಡಿದ್ದಾರೆ ಎಂದರು.
ಭಾರತದಲ್ಲಿ ಕೋಟ್ಯಾಂತರ ಜನರಿಗೆ ಉಚಿತವಾಗಿ ಲಸಿಕೆ ಕೊಟ್ಟಿದ್ದಾರೆ. ಹೀಗಾಗಿ ಭಾರತವನ್ನು ಮೋದಿ ಕರೋನಾ ಮುಕ್ತ ಮಾಡಿದ್ದಾರೆ. ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕಾಂಗ್ರೆಸ್ ಅಸ್ತಿತ್ವ ಸೋತು ಅಧೋಗತಿಗೆ ಹೋಗಿದೆ.
ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯೂನಲ್ಲಿ ಹೋಗಿದೆ. ಡಿಕೆಶಿ, ಸಿದ್ರಾಮಯ್ಯ ಸೇರಿದಂತೆ ಹಲವರು ಐಸಿಯೂ ನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ. ಅದು ಐಸಿಯುನಿಂದ ಹೊರಗೆ ಬರೋದಿಲ್ಲ. ಕೆಲವರು ಕಾಂಗ್ರೆಸ್ ನಿಂದ ಸಿಎಂ ಆಗಲು ತಿರುಕನ ಕನಸು ಕಾಣ್ತಿದ್ದಾರೆ. ಅದು ಆಗೋದಿಲ್ಲ. ಬಿಜೆಪಿ 104 ರಿಂದ 140 ಸೀಟ್ ಪಡೆದು ಈ ಬಾರಿ ಅಧಿಕಾರಕ್ಕೆ ಬರಲಿದೆ. ಸಂಸದೆ ಸುಮಲತಾ ಅವರು ಮೋದಿ ಅವರ ಸರ್ಕಾರಕ್ಕೆ ಬೆಂಬಲ ಕೊಡುತ್ತ ಬಂದಿದ್ದಾರೆ. ಬಿಜೆಪಿಗೆ ಅವರ ಬೆಂಬಲ ಎಂದು ಸ್ಪಷ್ಟವಾಗಿ ಹೇಳಿದಾರೆ.
ಅಲ್ಲದೇ, ವಿಜಯಪುರ ವಿಮಾನ ನಿಲ್ದಾಣ ಬಗ್ಗೆ ಟೇಬಲ್ ಕುಟ್ಟಿ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. 1984-85ರಲ್ಲಿ ನಾನು ಅದರ ಬಗ್ಗೆ ಪ್ಲಾನ್ ಮಾಡಿದೆ. ನಾನು ಮಂತ್ರಿ ಆದ ಬಳಿಕ 725 ಎಕರೆ ಭೂಮಿ ತಗೊಂಡು ವಿಮಾನ ನಿಲ್ದಾಣ ಮಾಡೋಕೆ ಮುಂದಾಗಿದ್ವಿ. ಆದ್ರೆ ಕಾಂಗ್ರೆಸ್ ನವರು ಅಧಿಕಾರಲ್ಲಿದ್ದಾಗ ಮಾಡಲು ಬಿಡಲಿಲ್ಲ ಎಂದು ವಾಗ್ದಾಳಿ ಮಾಡಿದರು. ಅಲ್ಲದೇ,
ಶೀಘ್ರದಲ್ಲೇ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದು ಟೇಬಲ್ ಕುಟ್ಟಿದರು. ಹಿಂದುತ್ವದ ನಾಯಕ ಯಾರಾದ್ರೂ ಇದ್ರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದರು. ಬಿಜೆಪಿ ಪಕ್ಷ ಸಮರ್ಥ ಇದೆ. ಅದು ಟಿಕೆಟ್ ನೀಡುವ ನಿರ್ಣಯ ಮಾಡುತ್ತದೆ ಎಂದರು.