ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾಮೆನ್ ಅಪ್ಪು ಚಿನಗುಂಡಿಗೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ..!*

Karnataka 1 News
ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾಮೆನ್ ಅಪ್ಪು ಚಿನಗುಂಡಿಗೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ..!*
  • *ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾಮೆನ್ ಅಪ್ಪು ಚಿನಗುಂಡಿಗೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ..!*­

*ಪ್ರಶಸ್ತಿ ನೀಡಿ ಗೌರವಿಸಲಿರುವ ಸಚಿವರು, ಸಿಎಂ ಮಾಧ್ಯಮ ಸಲಹೆಗಾರರು, KUWJ ರಾಜ್ಯಾಧ್ಯಕ್ಷರು..*

ವಿಜಯಪುರ (ಜುಲೈ 18): ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ‌ಮಟ್ಟದಲ್ಲಿ ನೀಡಲಾಗುವ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನ ವಿಜಯಪುರ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾಮೆನ್ ಅಪ್ಪಾಸಾಹೇಬ್ ಚಿನಗುಂಡಿಗೆ ಅವರಿಗೆ ನೀಡಲಾಗ್ತಿದೆ.

ಕಳೆದ 14 ವರ್ಷಗಳಿಂದ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಅಪ್ಪಾಸಾಹೇಬ್ ಚಿನಗುಂಡಿಯವರು ಮಾಡಿರುವ ಸ್ಟಿಂಗ್ ಆಫರೇಶನ್ ಗಳು ರಾಜ್ಯಮಟ್ಟದಲ್ಲಿ ಸದ್ದು ಮಾಡಿವೆ‌. ಅದ್ಭುತ ಛಾಯಾಗ್ರಹಣ, ಸೂಕ್ಷ್ಮ ಸಂವೇದನೆಯ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ನಿಪುಣರಾಗಿದ್ದಾರೆ. ಕಸ್ತೂರಿ ನ್ಯುಸ್ 24, ಪ್ರಜಾ ಟಿವಿ, ಸಧ್ಯ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಜಿಲ್ಲಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಸ್ತೂರಿ ನ್ಯುಸ್ 24 ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಕಳಸಾ ಬಂಡೂರಿಗಾಗಿ ಚಿತ್ರರಂಗದಿಂದ ನಡೆದ ಹೋರಾಟದ ವೇಳೆ ಉತ್ತಮ ಕವರೇಜ್ ಗಾಗಿ ಸಂಸ್ಥೆಯಿಂದ ಪ್ರಶಂಸೆ ಪಡೆದಿದ್ದರು. ಗದಗ ಜಿಲ್ಲೆಯಲ್ಲಿ ವಿಶೇಷ ಸ್ಟೋರಿಗಳಿಗಾಗಿ ಅದ್ಭತ ದೃಶ್ಯಗಳನ್ನ ಸೆರೆಹಿಡಿದಿದ್ದರು. ಇನ್ನು ಮಹಾರಾಷ್ಟ್ರದ ರೆಡ್‌ಲೈಟ್ ಏರಿಯಾಗಳಲ್ಲಿ ನಡೆಯುತ್ತಿದ್ದ ಕನ್ನಡದ ಹೆಣ್ಣು ಗೋಳಾಟದ ಕುರಿತು ರಹಸ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮನಕಲಕುವ ಎಕ್ಸಕ್ಲೂಜಿವ್ ದೃಶ್ಯಗಳನ್ನ ಸೆರೆಹಿಡಿದು ಭೇಷ್ ಎನಿಸಿಕೊಡಿದ್ದರು.

ಇನ್ನೂ ಕಳೆದ 4 ವರ್ಷಗಳಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ‌ ವಿಜಯಪುರ ಜಿಲ್ಲಾ ಕ್ಯಾಮರಾಮೆನ್ ಆಗಿ ಸೇವೆ ಸಲ್ಲಿಸ್ತಿರೋ ಅಪ್ಪಾಸಾಹೇಬ್ ಅವರು ಅನೇಕ ವಿಶೇಷ ತನಿಖಾ ವರದಿಗಳಲ್ಲಿ ತಮ್ಮ ಕ್ಯಾಮರಾ ಕೈಚಳಕ ತೋರಿಸಿರೋದು ಗಮನಾರ್ಹವಾಗಿದೆ. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಇವರ ಈ ಸೇವೆಯನ್ನ ಪರಿಗಣಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಗ್ತಿದೆ. ದಿನಾಂಕ 19 ರಂದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುತ್ತಿರುವ ಪತ್ರಿಕಾದಿನಾಚರಣೆಯಲ್ಲಿ ಸಚಿವ ಎಂ ಬಿ ಪಾಟೀಲ್, ಸಚಿವ ಶಿವಾನಂದ ಪಾಟೀಲ್, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವ್ಹಿ ಪ್ರಭಾಕರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷರಾದ ಶಿವಾನಂದ ತಗಡೂರ್ ಅವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ..

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";